ಮದ್ಯದಂಗಡಿ-ಡಾಬಾಗಳಿಂದ ನಿವಾಸಿಗಳಿಗೆ ತೊಂದರೆ

23 HDLP 03
ಹೂವಿನಹಡಗಲಿ ಮದಲಗಟ್ಟಿ ರಸ್ತೆಯ 2ನೇ ವಾರ್ಡ್‌ನಲ್ಲಿರುವ ಸರ್ಕಾರಿ ಮದ್ಯದ ಅಂಡಗಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಮದ್ಯದ ಅಂಗಡಿ ಮುಂದೆ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ತಾಲೂಕು ಅಧ್ಯಕ್ಷ ಜಿ.ಮೆಹಬೂಬ್ ಬಾಷಾ, ಕೂಡ್ಲಿಗಿ ತಾಲೂಕು ಅಧ್ಯಕ್ಷ ಹಾಲೇಶ್ ಕೆ, ಹೆಚ್.ಬಿ.ಹಳ್ಳಿ ತಾಲೂಕು ಅಧ್ಯಕ್ಷ ಗೌಸ್, ಹರಪನಹಳ್ಳಿ ತಾಲೂಕು ಅಧ್ಯಕ್ಷ ನಾಗರಾಜ, ಕೊಟ್ಟೂರು ತಾಲೂಕು ಅಧ್ಯಕ್ಷ ಶ್ರೀನಿವಾಸ, ಹೊಸಪೇಟೆ ತಾಲೂಕು ಅಧ್ಯಕ್ಷ ರಮೇಶ, ಸ್ಥಳೀಯ ನಿವಾಸಿಗಳಾದ ರಮೇಶ, ಅಶೋಕ, ಖಾಜಾಹುಸೇನ್ ಇತರರಿದ್ದರು.
Published on

ಹೂವಿನಹಡಗಲಿ: ಟ್ಟಣದ ಮದಲಗಟ್ಟಿ ರಸ್ತೆಯ 2ನೇ ವಾರ್ಡ್‌ನಲ್ಲಿರುವ ಸರ್ಕಾರಿ ಮದ್ಯದ ಅಂಗಡಿ ಹಾಗೂ ಡಾಬಾ ಮತ್ತು ರೆಸ್ಟೋರೆಂಟ್‌ಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸೋಮವಾರ ಮದ್ಯದಂಗಡಿ ಮುಂದೆ ಪ್ರತಿಭಟನೆ ನಡೆಸಿದರು.


ಕರವೇ ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಮಾತನಾಡಿ, ಜನವಸತಿ ಇರುವ ಭಾಗಗಳಲ್ಲಿ ಮದ್ಯದಂಗಡಿಗಳನ್ನು ಆರಂಭಿಸಬಾರದು. 2ನೇ ವಾರ್ಡ್‌ನಲ್ಲಿ ಅನೇಕ ಕುಟುಂಬಗಳು ವಾಸವಾಗಿದ್ದು, ಈ ಪ್ರದೇಶದಲ್ಲಿ ಡಾಬಾ ಮತ್ತು ರೆಸ್ಟೋರೆಂಟ್‌ಗಳಿಂದ ಸಾರ್ವಜನಿಕರು ಈ ವಾರ್ಡ್‌ನಲ್ಲಿ ಓಡಾಡಲು ಭಯಪಡುವಂತಾಗಿದೆ.

ಮದ್ಯ ಸೇವನೆ ಮಾಡಲು ಬರುವ ಮದ್ಯವ್ಯಸನಿಗಳು ಸುತ್ತಲಿನ ಕೃಷಿ ಭೂಮಿ ಹಾಗೂ ರಸ್ತೆಯ ಬದಿಯಲ್ಲಿಯೇ ಮದ್ಯ ಸೇವಿಸುತ್ತಿದ್ದು, ನಿವಾಸಿಗಳಿಗೆ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತಿದೆ. ಮದ್ಯದ ಅಂಗಡಿಯನ್ನು ಬಂದ್‌ಮಾಡಬೇಕು ಎಂದುಪಟ್ಟು ಹಿಡಿದರು.

ಸ್ಥಳಕ್ಕೆ ಪಿಎಸ್‌ಐ ವಿಜಯಕೃಷ್ಣ ಭೇಟಿ ನೀಡಿ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಮದ್ಯದ ಅಂಗಡಿಗೆ ಕೀಲಿ ಹಾಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net