ಮದ್ಯ ವಶ, ಆರೋಪಿ ಬಂಧನ

Published on

ಕಾಸರಗೋಡು: ಮಂಜೇಶ್ವರ ತಾಲೂಕಿನ ಕೊಯಿಪ್ಪಾಡಿ ಗ್ರಾಮದ ಕಳತ್ತೂರು ಚೆಕ್‌ಪೋಸ್ಟ್ ಬಳಿ ಕಾಸರಗೋಡು ಅಬಕಾರಿ ವಿಶೇಷ ದಳದ ಸಹಾಯಕ ಅಬಕಾರಿ ನಿರೀಕ್ಷಕ ಗ್ರೇಡ್ ಸಿ.ಕೆ.ವಿ.ಸುರೇಶ್ ಮತ್ತು ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರಲ್ಲಿ ಸಾಗಿಸುತ್ತಿದ್ದ 15.57 ಲೀಟರ್‌ಮದ್ಯ ವಶಪಡಿಸಿಕೊಂಡು ಕಿದೂರು ನಿವಾಸಿ ಹರಿಪ್ರಸಾದ್ ಎಂಬಾತನನ್ನು ಬಂಧಿಸಲಾಗಿದೆ. ಮದ್ಯ ಸಾಗಾಟಕ್ಕೆ ಬಳಸಿದ್ದ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net