

ಧಾರವಾಡ: ಲೋಕಸಭಾ ಚುನಾವಣೆಗೆ ಮತದಾನ ನಡೆಯುವ ಮೇ ೭ ಹಾಗೂ ಮತ ಏಣಿಕೆ ನಡೆಯುವ ಜೂ. ೪ರಂದು ಜಿಲ್ಲೆಯಾದ್ಯಂತ ಮದ್ಯಪಾನ, ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಮತ್ತು ಮದ್ಯ ಸಂಗ್ರಹಣೆಯನ್ನು ನಿಷೇಽಸಿ ಜಿಲ್ಲಾಽಕಾರಿ ದಿವ್ಯ ಪ್ರಭು ಆದೇಶಿಸಿದ್ದಾರೆ. ಮೇ ೫ರ ಸಂಜೆ ೭ರಿಂದ ಮೇ ೭ರ ಮಧ್ಯರಾತ್ರಿ ೧೧:೫೯ರವರೆಗೆ ಹಾಗೂ ಜೂ. ೩ರ ಮಧ್ಯರಾತ್ರಿ ೧೧:೫೯ರಿಂದ ಜೂ. ೪ರ ಮಧ್ಯರಾತ್ರಿ ೧೧:೫೯ರವರೆಗೆ ಮದ್ಯಪಾನ, ಮಾರಾಟ, ಸಾಗಾಣಿಕೆಯನ್ನು ನಿಷೇಽಸಲಾಗಿದೆ ಎಂದು ದಿವ್ಯ ಪ್ರಭು ತಿಳಿಸಿದ್ದಾರೆ.