ಮದ್ಯಪಾನ, ಮಾರಾಟ ನಿಷೇಧ

web 5
Published on

ಧಾರವಾಡ: ಜಿಲ್ಲೆಯಲ್ಲಿ ಮೊಹರಂ ಹಬ್ಬದ ಆಚರಣೆ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜು. 28ರಿಂದ 31ರವರೆಗೆ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ಧಾರವಾಡ ಗ್ರಾಮೀಣ, ಹುಬ್ಬಳ್ಳಿ, ಅಳ್ನಾವರ, ನವಲಗುಂದ, ಅಣ್ಣಿಗೇರಿ, ಕಲಘಟಗಿ, ಕುಂದಗೋಳ ತಾಲೂಲುಗಳಲ್ಲಿ ಜು. 28ರ ಸಂಜೆ 6ರಿಂದ 30ರ ಸಂಜೆ 6ರವರೆಗೆ ಹಾಗೂ ಹುಬ್ಬಳ್ಳಿ ಗ್ರಾಮೀಣ ತಾಲೂಕು ಅರಳಿಕಟ್ಟಿ ಗ್ರಾಮ ಮತ್ತು ಕುಂದಗೋಳ ತಾಲೂಕಿನ ಯರಗುಪ್ಪಿ, ಯರಿನಾರಾಯಣಪುರ, ಚಿಕ್ಕನರ್ತಿ, ಮುಳ್ಳೊಳ್ಳಿ, ಪಶುಪತಿಹಾಳ ಗ್ರಾಮಗಳಲ್ಲಿ 29ರಂದು ಸಂಜೆ 6ರಿಂದ 31ರ ಬೆಳಗಿನ 6ರವರೆಗೆ ನಿಷೇಧಿಸಲಾಗಿದೆ. ಆದೇಶ ಉಲ್ಲಂಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net