ಮದ್ಯ ಸೇವಿಸಿದ ಅಮಲಿನಲ್ಲಿ ಕುಮುದ್ವತಿ ನದಿಯಲ್ಲಿ ಬಿದ್ದು ವ್ಯಕ್ತಿ ಸಾವು

Crime Logo
Published on

ರಟ್ಟಿಹಳ್ಳಿ: ಮದ್ಯ ಸೇವಿಸಿದ ಅಮಲಿನಲ್ಲಿ ಕುಮುದ್ವತಿ ನದಿಯಲ್ಲಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಪಟ್ಟಣದ ಕಬ್ಬಿಣಕಂತಿಮಠದ ಬಳಿ ಮಂಗಳವಾರ ನಡೆದಿದೆ.
ಸೋಮಶೇಖರ ರಾಚಪ್ಪ ದೊಡ್ಡಮನಿ (32) ಮೃತ ವ್ಯಕ್ತಿ.
ಈತ ಮದ್ಯ ಸೇವಿಸುವ ಚಟಕ್ಕೆ ಅಂಟಿಕೊಂಡಿದ್ದು, ಮದ್ಯ ಸೇವಿಸಿದ ಅಮಲಿನಲ್ಲಿ ನದಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net