ಮದ್ಯದ ಅಮಲಲ್ಲಿ ಮರವೇರಿ ಮೊಂಡಾಟ!

liquor
Published on

ಸುಳ್ಯ: ತಾಲೂಕಿನ ಮರ್ಕಂಜದಲ್ಲಿ ಕೇರಳ ಮೂಲದ ಯುವಕ ಅನಿಲ್ ಎಂಬಾತ ಮದ್ಯದ ಅಮಲಿನಲ್ಲಿ ಮರವೇರಿ ರಂಪಾಟ ನಡೆಸಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ಕೆಳಗಿಳಿಸಲಾಯಿತು.

ಸೋಮವಾರ ಮಧ್ಯಾಹ್ನ ಅಂಬೆಕಲ್ಲು ಎಂಬಲ್ಲಿ ವ್ಯಕ್ತಿಯೊಬ್ಬರ ಕಾಡು ತುಂಬಿದ್ದ ಜಾಗದಲ್ಲಿ ಮರವೇರಿ ಬೊಬ್ಬೆ ಹೊಡೆಯತೊಡಗಿದ್ದ. ಸ್ಥಳೀಯರು ವಿಚಾರಿಸಿ ಮರದಿಂದ ಇಳಿಸಲು ಪ್ರಯತ್ನಪಟ್ಟರೂ ನಿರಾಕರಿಸಿದ್ದ. ರಾತ್ರಿಯಾದರೂ ಇಳಿಯದ ಕಾರಣ ಪೊಲೀಸರು, ಅಗ್ನಿಶಾಮಕ ದಳಕ್ಕೆ ತಿಳಿಸಲಾಯಿತು.

ಆತನೊಂದಿಗೆ ಮಲಯಾಳಂ ಭಾಷೆಯಲ್ಲಿ ಮಾತನಾಡಿದಾಗ, ನನ್ನ ಮೇಲೆ ಹುಡುಗಿ ವಿಚಾರದಲ್ಲಿ ಆರೋಪ ಮಾಡಿರುವ ಬಗ್ಗೆ, ವ್ಯಕ್ತಿಯೊಬ್ಬರು ಹಣ ನೀಡಬೇಕಿರುವ ಬಗ್ಗೆ ತಿಳಿಸಿದ್ದಾನೆ. ಅಂಗಿಯನ್ನು ಮರದ ಬುಡದಲ್ಲಿಯೇ ಬಿಟ್ಟು ಮರವನ್ನೇರಿದ್ದು, ಕೈಯಲ್ಲಿದ್ದ ಮೊಬೈಲ್‌ನಿಂದ ಮರದಿಂದಲೇ ಪೊಲೀಸರಿಗೆ ಕರೆ ಮಾಡಿದ್ದ.

ರಾತ್ರಿ ಅಗ್ನಿಶಾಮಕ ದಳ ಮನವೊಲಿಸಿ ಏಣಿಯಲ್ಲಿ ಆತನನ್ನು ಇಳಿಸಿದ್ದಾರೆ. ಬಳಿಕ ಸುಳ್ಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net