ಲಯನ್ಸ್ ಕ್ಲಬ್ ಸೇವಾ ದಿವಸ

Published on

ಹುಬ್ಬಳ್ಳಿ: ಲಯನ್ಸ್ ಕ್ಲಬ್ ಆ್ ಹುಬ್ಬಳ್ಳಿ ಪರಿವಾರ ವತಿಯಿಂದ ಸೇವಾ ದಿವಸವನ್ನು ಇಲ್ಲಿಯ ಗೋಕುಲ ರಸ್ತೆ ಕ್ಲಾಸಿಕ್ ಹೋಟೆಲ್ನಲ್ಲಿ ಏ. 27ರಂದು ಸಂಜೆ 7ಕ್ಕೆ ಏರ್ಪಡಿಸಲಾಗಿದೆ.

ಸಾಮಾಜಿಕ ಸೇವಾ ಕಾರ್ಯಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ. ಮಹಾವೀರ ಲಿಂಬ್ ಸೆಂಟರ್ನಲ್ಲಿ ಉಚಿತ ಕೃತಕ ಕಾಲು ಜೋಡಣೆ ಶಿಬಿರ, ಸರಸ್ವತಿ ಸೇವಾ ಸಮ್ಮಾನ ಯೋಜನೆಯಲ್ಲಿ ಪ್ರತಿಭಾವಂತರಿಗೆ ಸೇವಾ ಧನ ವಿತರಣೆ ಮಾಡಲಾಗುವುದು.

ಲಯನ್ಸ್ ಜಿಲ್ಲಾ ಗವರ್ನರ್ ಆರ್ಲ ಬ್ರಿಟೋ ಭಾಗವಹಿಸುವರು. ಲಯನ್ಸ್ ಅಧ್ಯಕ್ಷ ಶ್ರೀಕಾಂತ ಕರಿ ಅಧ್ಯಕ್ಷತೆ ವಹಿಸುವರು. ಮಹೇಂದ್ರ ಸಿಂಘಿ, ಸಂತೋಷ ಪಾಟೀಲ, ಮೋಹನ ಸುತಾರ ಇತರರು ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net