

ಕಾರವಾರ: ವಿಶ್ವ ಲಯನ್ಸ್ ಸೇವಾ ದಿನದ ಅಂಗವಾಗಿ ಸದಾಸಶಿವಗಡದ ಸುರಭಿ ವೃದ್ಧಾಶ್ರಮಕ್ಕೆ ಲಯನ್ಸ್ ಸದಸ್ಯರು ತೆರಳಿ ಅಗತ್ಯ ವಸ್ತುಗಳನ್ನು ವಿತರಿಸಿದರು.
ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ವರ್ಷವಾಗಿದ್ದು ವೃದ್ದರಿಗೆ ಹಣ್ಣು ಹಂಪಲು, ತರಕಾರಿ, ಅಗತ್ಯ ಬಟ್ಟೆ ತಿಂಡಿ ತಿನಿಸು ವಿತರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಗಜಾನನ ಆಳ್ವಾ ಮಾತನಾಡಿ, ಸುರಭಿ ವೃದ್ದಾಆಶ್ರಮಕ್ಕೆ ಮುಂದೆಯೂ ಅವಶ್ಯಕತೆ ಇರುವ ವಸ್ತುಗಳನ್ನು ಪೂರೈಸುತ್ತೇವೆ. ಕಾರವಾರ ಲಯನ್ಸ್ ಕ್ಲಬ್ ಸದಾ ನಿಮ್ಮ ಸೇವೆಗೆ ಸಿದ್ದ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಯನ್ಸ್ ರೀಜನ್ ಚೇರ್ ಪರ್ಸನ್ ಲಯನ್ ಐಶ್ವರ್ಯ ಮಾಸೂರಕರ್, ಕಾರ್ಯದರ್ಶಿ ಶಶಿನಂದನ ಮಾಸೂರಕರ್, ಕೋಶಾಧ್ಯಕ್ಷ ಅನಿರುದ್ಧ ಹಳದೀಪೂರಕರ್, ಹಿರಿಯ ಲಯನ್ ಕೆ. ಎಸ್. ಕಿನ್ನರಕರ್ ಉಪಸ್ಥಿತರಿದ್ದರು. ವೃದ್ದಾಶ್ರಮದ ಉಸ್ತುವಾರಿಗಳಾದ ಸುದೇಶ ಮರಾಟೆ ಸ್ವಾಗತಿ ವಂದಿಸಿದರು.