ಡಾ.ಕೃಷ್ಣೇಗೌಡ ಹುಸ್ಕೂರು ಲಯನ್ಸ್ ಅಧ್ಯಕ್ಷ: ನಗರದಲ್ಲಿ ಪದಗ್ರಹಣ ಸಮಾರಂಭ

2 (1)
Published on

ಮಂಡ್ಯ: ನಗರದ ಹೊರವಲಯದ ಅಗ್ರಿ ಕ್ಲಬ್ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317ಜಿ, ಮಂಡ್ಯ ಸಾಹಿತ್ಯ ಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ 2023-24ನೇ ಸಾಲಿನ ಅಧ್ಯಕ್ಷರಾಗಿ ಲಯನ್ಸ್ ಡಾ.ಕೃಷ್ಣೇಗೌಡ ಹುಸ್ಕೂರು ಅಧಿಕಾರ ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು, ನಾವು ವಿದ್ಯಾರ್ಥಿಯಾಗಿದ್ದಾಗ ದಿನಕ್ಕೊಂದು ಒಳ್ಳೆಯ ಕೆಲಸ ಮಾಡಿಕೊಂಡು ಬನ್ನಿ ಎಂದು ಶಿಕ್ಷಕರು ಪ್ರೇರೇಪಿಸುತ್ತಿದ್ದರು. ಆ ಒಳ್ಳೆಯ ಕೆಲಸವನ್ನು ಪ್ರತಿನಿತ್ಯ ಮನೆ ದಿನಚರಿ ಪುಸ್ತಕದಲ್ಲಿ ಬರೆಸುತ್ತಿದ್ದರು. ಅದರಿಂದ ನಾನು ಪ್ರೇರೇಪಿತಗೊಂಡು ಸಮಾಜ ಸೇವೆ ಮಾಡಲು ಮುಂದಾಗಿರುವೆ ಎಂದು ವಿವರಿಸಿದರು.

ಜಿಲ್ಲಾ ಸಂಪುಟ ಸಲಹೆಗಾರ ಕೆ.ದೇವೇಗೌಡ, ಮಾಜಿ ಗವರ್ನರ್ ಜಿ.ಎ.ರಮೇಶ್, ಎರಡನೇ ಗವರ್ನರ್ ಕೆ.ಎಲ್.ರಾಜಶೇಖರ್, ಎಸ್.ಮತಿದೇವಕುಮಾರ್, ವಿ.ಹರ್ಷ, ಚಂದ್ರಶೇಖರ್, ಕೆ.ಎಸ್.ಸವಿತಾ, ಎಲ್.ಕೃಷ್ಣ, ಎಂ.ಆರ್.ಮಂಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net