

ವಿಜಯವಾಣಿ ಸುದ್ದಿಜಾಲ ಆನೇಕಲ್
ಲಯನ್ಸ್ ಕ್ಲಬ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಆ್ ಜಿಗಣಿ ಟೌನ್‌ನ ನೂತನ ಅಧ್ಯಕ್ಷರಾಗಿ ಎಂ.ರಾಮಾಂಜನೇಯ, ಕಾರ್ಯದರ್ಶಿಯಾಗಿ ದೇವರಾಜ್, ಖಜಾಂಚಿಯಾಗಿ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷ ಎಂ.ರಾಮಾಂಜನೇಯ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಸ್ಥೆ ವತಿಯಿಂದ ಇನ್ನಷ್ಟು ಸೇವಾ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ ಎಂದರು.
ಅಂತಾರಾಷ್ಟ್ರೀಯ ನಿಯೋಜಿತ ನಿರ್ದೇಶಕ ರಾಮಚಂದ್ರನ್ ಮಾತನಾಡಿ, ಲಯನ್ಸ್ ಕ್ಲಬ್ ಆ್ ಜಿಗಣಿ ಟೌನ್ ಈಗಾಗಲೇ ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ಬಾಗದಲ್ಲಿ ಉತ್ತಮ ಸೇವಾ ಕಾರ್ಯಕ್ರಮಗಳನ್ನು ಮಾಡಿ, ರಾಜ್ಯದಲ್ಲಿಯೇ 2ನೇ ಸ್ಥಾನ ಪಡೆದುಕೊಂಡಿದೆ. ಈ ಸಂಸ್ಥೆ ಇನ್ನಷ್ಟು ಸೇವಾ ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಶುಭ ಹಾರೈಸಿದರು.
ಪದಗ್ರಹಣ ಅಧಿಕಾರಿ ಎಸ್.ರಾಜಶೇಖರಯ್ಯ, ಲಯನ್ಸ್ ಕ್ಲಬ್‌ನ ಮೊದಲನೇ ಉಪ ರಾಜ್ಯಪಾಲ ಅಶ್ವತ್ಥ್ ನಾರಾಯಣಸ್ವಾಮಿ, ಲಯನ್ ಅರುಣ್ ಕುಮಾರ್, ಲಯನ್ ಮೋಹನ್ ಕುಮಾರ್, ರೇಣುಕಾ ಪ್ರಕಾಶ್, ಆಥೋಂಣಿ, ಲಯನ್ಸ್ ಕ್ಲಬ್ ಆ್ ಜಿಗಣಿ ಟೌನ್‌ನ ಮಾಜಿ ಅಧ್ಯಕ್ಷ ಚಂದ್ರ ಮೋಹನ್, ಎ.ಡಿ.ಮೋಹನ್, ಹಾರಗದ್ದೆ ಪ್ರಭಾಕರ್, ಎ.ಕೇಶವಮೂರ್ತಿ, ನಾರಾಯಣ್, ಅಬ್ರಾಹಂ ಡೇವಿಡ್ ಇದ್ದರು.