ಸಮಾಜಸೇವೆಗೆ ಲಯನ್ಸ್ ಆದ್ಯತೆ

sri lions
ಶೃಂಗೇರಿಯಲ್ಲಿ ಲಯನ್ಸ್ ಜಿಲ್ಲಾ ಗೌರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಡಾ. ಮೆಲ್ವಿನ್ ಡಿಸೋಜಾ ಮಾತನಾಡಿದರು.ನರಹರಿ, ಉಮೇಶ್, ಸುಧಾಕರ್ ಶೆಟ್ಟಿ ಇದ್ದರು.
Published on

ಶೃಂಗೇರಿ: ಲಯನ್ಸ್ ಸಂಸ್ಥೆ ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಮೌಲ್ಯಗಳಿಗೆ ಹೆಚ್ಚು ಆದ್ಯತೆ ನೀಡುತ್ತ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ 317ರ ಗೌರ್ನರ್ ಡಾ. ಮೆಲ್ವಿನ್ ಡಿಸೋಜಾ ಹೇಳಿದರು.

ಬುಧವಾರ ಜಿಲ್ಲಾ ಗೌರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಲಯನ್ಸ್ ಐದು ಹೊಸ ಶಾಖೆ ತೆರೆಯಲಾಗಿದೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರಿಗೆ ಸಂಸ್ಥೆ ಸೇವಾಕಾರ್ಯ ತಲುಪಬೇಕು ಎಂಬ ದೃಷ್ಟಿಯಿಂದ ಕೆಲಸ ಮಾಡಲಾಗುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಸ್ಥೆ ನೀಡಿದ ಕೊಡುಗೆ ಅಪಾರ. ಶೃಂಗೇರಿ ಲಯನ್ಸ್ ಸಂಸ್ಥೆ ಕೃಷಿ, ಆರೋಗ್ಯ, ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ ಎಂದರು.
ಸಂಸ್ಥೆ ಅಧ್ಯಕ್ಷ ವಿವೇಕ್ ಬೇಗಾನೆ ಮಾತನಾಡಿ, ವನಮಹೋತ್ಸವ, ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ, ರೈತರಿಗೆ ಕೃಷಿ ಮಾಹಿತಿ, ರಕ್ತದಾನ ಇತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಕಾರ್ಯದರ್ಶಿ ರಕ್ಷಿತ್, ಕೋಶಾಧ್ಯಕ್ಷ ಸಿ.ವಿ.ನರಹರಿ, ಮಾಜಿ ಅಧ್ಯಕ್ಷ ಉಮೇಶ್ ಪೊದುವಾಳ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net