ಲಯನ್ಸ್ ಸಂಸ್ಥೆ ಸೇವಾ ಕಾರ್ಯ ಶ್ಲಾಘನೀಯ

05 gkp 01
ಗೋಣಿಕೊಪ್ಪಲುವಿನಲ್ಲಿ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗುತ್ತಿರುವ ಕಟ್ಟಡಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು. ಪೊನ್ನಿಮಾಡ ಲೋಕೇಶ್, ಪ್ರಮೋದ್ ಗಣಪತಿ, ಧ್ಯಾನ್ ಸುಬ್ಬಯ್ಯ, ಬಿ.ಎನ್.ಪ್ರಕಾಶ್ ಇದ್ದರು.
Published on

ಗೋಣಿಕೊಪ್ಪ: ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ಅಂಗವಾಗಿ ಲಯನ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗುತ್ತಿರುವ ನೂತನ ಕಟ್ಟಡಕ್ಕೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ಸಂಘ-ಸಂಸ್ಥೆಗಳು ಸಮಾಜದ ಒಳಿತಿಗಾಗಿ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಲಯನ್ಸ್ ಸಂಸ್ಥೆ ಅನೇಕ ಜನೋಪಯೋಗಿ ಕೆಲಸಗಳನ್ನು ನಿರ್ವಹಿಸುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ಗಳಿಸಿದೆ. ಇದೀಗ ಗೋಣಿಕೊಪ್ಪ ಪಟ್ಟಣದಲ್ಲಿ ಸಾರ್ವಜನಿಕರ ಸೇವೆಗಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಲಯನ್ಸ್ ಅಧ್ಯಕ್ಷ ಪೊನ್ನಿಮಾಡ ಲೋಕೇಶ್ ಮಾತನಾಡಿ, ನಿವೇಶನ ಖರೀದಿಸಲು ಟ್ರಸ್ಟ್‌ನಿಂದ ಲಕ್ಷಾಂತರ ರೂ. ವಿನಿಯೋಗಿಸಲಾಗಿದೆ. ಜಾಗ ಖರೀದಿ ಸಂದರ್ಭ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯಾ ಬಾಲು ಹಾಗೂ ಸದಸ್ಯರು ಸಹಕಾರ ನೀಡಿದ್ದಾರೆ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಪೊನ್ನಿಮಾಡ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಸದಸ್ಯರಾದ ಧ್ಯಾನ್ ಸುಬ್ಬಯ್ಯ, ಬಿ.ಎನ್.ಪ್ರಕಾಶ್, ಮನ್ನಕ್ಕಮನೆ ಸೌಮ್ಯಬಾಲು, ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಅಮ್ಮಂಡ ಚಿಣ್ಣಪ್ಪ, ಟ್ರಸ್ಟ್ ಅಧ್ಯಕ್ಷ ಪಾರುವಂಗಡ ಪೆಮ್ಮಯ್ಯ, ಉಪಾಧ್ಯಕ್ಷ ಪಟ್ಟಡ ಉತ್ತಯ್ಯ, ಕಾರ್ಯದರ್ಶಿ ಶರತ್ ದೇವಯ್ಯ, ಕ್ಲಬ್‌ನ ಮಾಜಿ ಅಧ್ಯಕ್ಷ ಜಮ್ಮಡ ಮಾದಪ್ಪ, ಕೊಡಂದೇರ ಸುಬ್ಬಯ್ಯ, ಮನ್ನಕ್ಕಮನೆ ಬಾಲಕೃಷ್ಣ, ಕೊಂಗಂಡ ಸುಬ್ಬಯ್ಯ,ಕೊಂಗಂಡ ಅಚ್ಚಯ್ಯ, ಪುತ್ತಮನೆ ಸ್ಮರಣ್, ಅಲ್ಲುಮಾಡ ಸುನೀಲ್, ಮದ್ರಿರ ಕರುಂಬಯ್ಯ, ಜಮ್ಮಡ ಮೋಹನ್,ಚೆಪ್ಪುಡೀರ ಅಪ್ಪಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net