

ಸರಗೂರು: ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳ ಮೂಲಕ ಸಮಾಜದಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಲಯನ್ಸ್ ಸಂಸ್ಥೆ ಜಿಲ್ಲಾ ಉಪ ಪ್ರಾಂತಪಾಲ ಎಸ್.ಮತ್ತಿದೇವಕುಮಾರ್ ತಿಳಿಸಿದರು.
ತಾಲೂಕಿನ ಪಟ್ಟಣದ ಲಯನ್ಸ್ ಅಕಾಡೆಮಿ ಶಾಲೆ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಲಯನ್ಸ್ ನೂತನ ಪದಾಧಿಕಾರಿಗಳ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಚಿಂತನೆಯಲ್ಲಿ ಸ್ಪಷ್ಟತೆ, ಹೃದಯದಲ್ಲಿ ಪರಿಶುದ್ಧತೆ ಇದ್ದರೆ ನಾವು ಮಾಡುವ ಕೆಲಸ ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಪರಿಪೂರ್ಣವಾಗಿ ಮಾಡಬೇಕು. ಆವಾಗಲೇ ಮನಸ್ಸಿಗೆ ನೆಮ್ಮದಿ ಬರುತ್ತದೆ ಎಂದರು.
ನಾವು ಗುರಿ ಮುಟ್ಟಲು ಹೇಗೆ ಶ್ರಮಿಸುತ್ತೆವೆನೋ ಹಾಗೆ ಅಲ್ಲಿಂದ ನಿರ್ಗಮಿಸುವಾಗ ಅಲ್ಲಿ ಬಿಟ್ಟು ಹೋದ ಮೌಲ್ಯಗಳು ಮುಂದಿನ ಪೀಳಿಗೆಗೆ ಆದರ್ಶದಾಯಕವಾಗಿರಬೇಕು. ಇದರಿಂದ ಸಂಸ್ಥೆಯ ಸೇವಾ ಕಾರ್ಯಗಳ ಮೂಲಕ ಸಮಾಜ ಸುಧಾರಣೆಯಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯ ಎಂದರು.
ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಎಸ್.ಎಸ್.ಪ್ರಭುಸ್ವಾಮಿ ಮಾತನಾಡಿ, ನಮ್ಮ ಶಾಲೆಗೆ ಶಾಸಕ ಅನಿಲ್ ಚಿಕ್ಕಮಾದು 10 ಲಕ್ಷ ರೂ. ಹಾಗೂ ಮರಿತಿಬ್ಬೇಗೌಡ 5 ಲಕ್ಷ ರೂ. ಅನುದಾನ ನೀಡಿದ್ದಾರೆ. ಇವರು ನೀಡಿದ ಅನುದಾನವನ್ನು ಬಳಸಿಕೊಂಡು ಶಾಲೆಯ ಕೊಠಡಿ ನಿರ್ಮಾಣ ಮಾಡಲಾಗುವುದು. ಪೂರ್ಣಗೊಂಡ ಮೇಲೆ ಶಾಸಕ ಅನಿಲ್ ಚಿಕ್ಕಮಾದು ಉದ್ಘಾಟನೆ ನೆರವೇರಿಸಲಿದ್ದಾರೆ. ಇದರಿಂದ ಶಾಲೆಯ ಅಭಿವೃದ್ಧಿ ಸಾಧ್ಯ. ಮುಂದಿನ ಮಕ್ಕಳ ಕಲಿಕೆಯನ್ನು ಹೆಚ್ಚಿಸಲು ನಮ್ಮ ಸಂಸ್ಥೆ ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆ ಮೈಸೂರು ವಲಯ ಅಧ್ಯಕ್ಷ ರತ್ನಾಕರ ಮಾತನಾಡಿದರು. ವೈದ್ಯರ ದಿನಾಚರಣೆ ಅಂಗವಾಗಿ ಸರಗೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಪಾರ್ಥಸಾರಥಿ ಅವರನ್ನು ಸನ್ಮಾನಿಸಲಾಯಿತು.
ಸರಗೂರು ಲಯನ್ಸ್ ಸಂಸ್ಥೆ ಅಧ್ಯಕ್ಷ ಎಸ್.ನಾರಾಯಣ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೂತನವಾಗಿ ಅಧ್ಯಕ್ಷರ ಆಯ್ಕೆಯಾದ ಬಳಿಕ ಶಾಲೆಯ ಮಕ್ಕಳಿಗೆ 23 ಬ್ಯಾಗ್‌ಗಳನ್ನು ಉಚಿತವಾಗಿ ವಿತರಿಸಿದರು.
ಪಪಂ ಸದಸ್ಯರಾದ ಶ್ರೀನಿವಾಸ, ಶಿವಕುಮಾರ್, ಸರಗೂರು ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್.ಪ್ರಭುಸ್ವಾಮಿ, ಬ್ರಹ್ಮದೇವಯ್ಯ, ಎಸ್ ವಿ ಯೋಗೇಶ್, ಎಸ್ ಬಿ ನಾಗರಾಜು, ಎಸ್ ಎನ್ ಮೋಹನ್, ಕುಮಾರ್, ಕೆ ಸುರೇಶ್, ಜೈನ್, ಎಸ್ ಪಿ ಪ್ರತಾಪ್, ಎಸ್ ಎಸ್.ಸೋಮಪ್ರಭ, ಎಸ್.ಎಸ್.ಶ್ರೀಕಂಠಸ್ವಾಮಿ, ಎಸ್.ಎಸ್.ಪ್ರಸಾದ್, ಎಂ.ಕೆ.ಹರಿದಾಸ್, ಎಸ್.ಪಿ.ಅಮಿತ್, ಮಂಡಳಿ ಅಧ್ಯಕ್ಷ ಎಸ್.ಎಂ.ಶ್ರೀನಿವಾಸ್, ಕಾರ್ಯದರ್ಶಿ ಎಸ್.ಸಿ.ವೆಂಕಟೇಶ್, ಶಾಲೆಯ ಪ್ರಾಂಶುಪಾಲ ದಾಸಾಚಾರಿ, ಮುಖ್ಯಶಿಕ್ಷಕಿ ಪದ್ಮಶ್ರೀ ಹಾಜರಿದ್ದರು.