

ಗೋಕಾಕ: ಸೇವಾ ಮನೋಭಾವದಿಂದ ಸಮಾಜಮುಖಿ ಕೆಲಸ ಮಾಡುತ್ತಿರುವ ಲಯನ್ಸ್ ಸಂಸ್ಥೆ ಕಾರ್ಯ ಮಾದರಿಯಾಗಿದೆ ಎಂದು ಲಯನ್ಸ್ ಸಂಸ್ಥೆ ನಿಕಟಪೂರ್ವ ಜಿಲ್ಲಾ ಪ್ರಾಂತಪಾಲ ಸುಗ್ಗಲ ಎಲಿಮಳಿ ಹೇಳಿದರು.
ನಗರದ ಕ್ಲಬ್ ಹೌಸ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಯನ್ಸ್ ಸಂಸ್ಥೆಯ 47ನೇ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ, ನೇತ್ರದಾನ, ಅನ್ನದಾನ ಸೇರಿ ಲಯನ್ಸ್ ಸಂಸ್ಥೆ ಹತ್ತಾರು ಕಾರ್ಯಗಳ ಉತ್ತಮ ಸೇವೆ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕಾರ್ಯ ರೂಪಿಸಲಿ ಎಂದರು.
ಲಯನ್ಸ್ ಸಂಸ್ಥೆಯ ಭಾರತಿ ವಾಡವಿ ಮಾತನಾಡಿ, ಹುಟ್ಟು-ಸಾವುಗಳ ಮಧ್ಯೆ ಪರೋಪಕಾರ ಕಾರ್ಯ ಮಾಡಬೇಕು ಎಂದರು. ನೂತನ ಅಧ್ಯಕ್ಷರಾಗಿ ಶ್ರೀಶೈಲ ಹಂಜಿ, ಕಾರ್ಯದರ್ಶಿಯಾಗಿ ಎಚ್.ಬಿ.ಪಾಟೀಲ ಹಾಗೂ ಖಜಾಂಚಿಯಾಗಿ ಅಶೋಕ ದೇಯನ್ನವರ ಅಧಿಕಾರ ಸ್ವೀಕರಿಸಿದರು. ಲಯನ್ಸ್ ಸಂಸ್ಥೆಯ ಸತೀಶ ಪಾಟೀಲ, ಜಿ.ಎಸ್.ಸಿದ್ಧಾಪುರಮಠ, ಅಶೋಕ ಲಗಮಪ್ಪಗೋಳ, ಸುರೇಶ ಶಿಂಧಿಹಟ್ಟಿ, ಪ್ರಶಾಂತ ಅಂಕದವರ ಇತರರಿದ್ದರು.