

ಮೈಸೂರು: ಮೈಸೂರಿನ ಮೊದಲ ಮಹಿಳಾ ಲಯನ್ಸ್ ಕ್ಲಬ್ ಖ್ಯಾತಿಯ ಗಂಗೋತ್ರಿ ಶಾಖೆ ನೂತನ ಅಧ್ಯಕ್ಷೆ ಕೆ.ಟಿ.ಮೀನಾಕುಮಾರಿ ಅವರ ಪದಗ್ರಹಣ ಸಮಾರಂಭ ಇತ್ತೀಚೆಗೆ ವಿಶೇಷವಾಗಿ ನಡೆಯಿತು.
ಕ್ಲಬ್‌ನ ಮಹಿಳೆಯರು ದೇಣಿಗೆ ಸಂಗ್ರಹಿಸಿ ಶ್ರವಣ ಶಸ್ತ್ರಚಿಕಿತ್ಸೆ, ಅರಣ್ಯ ವ್ಯಾಪ್ತಿಯ ಅಂಗನವಾಡಿಗಳಿಗೆ ಆಧುನಿಕ ಸ್ಪರ್ಶ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡುವ ಮೂಲಕ ಭೇಷ್ ಎನಿಸಿಕೊಂಡರು. ಸರ್ಕಾರಿ ಶಾಲಾ ಮಕ್ಕಳಿಗೆ 20 ಸಾವಿರ ರೂ. ಮೌಲ್ಯದ ಸ್ಟೇಷನರಿ ಕಿಟ್ಸ್, ಸ್ಕೂಲ್ ಬ್ಯಾಗ್ಸ್ ನೀಡಲಾಯಿತು.
ಕೆ.ಟಿ.ಮೀನಾಕುಮಾರಿ ಮಾತನಾಡಿ, ಸಾಮಾಜಿಕ ಕಾರ್ಯಗಳಿಗೆ ತನ್ನನ್ನು ಗುರುತಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ಮಾಡುತ್ತಿರುವ ಲಯನ್ಸ್ ಸಂಸ್ಥೆ ಅನನ್ಯ ಸೇವೆ ಒದಗಿಸುತ್ತಿದೆ. ಹಳ್ಳಿಯಿಂದ ಹಿಡಿದು ಮಹಾನಗರ ತನಕ ಶೋಷಿತ, ದಮನಿತ ಅನಾಥ ಮಹಿಳೆಯರು, ಮಕ್ಕಳಿಗೆ ಸಹಾಯ, ಸಹಕಾರ, ಆರೋಗ್ಯ ಸೇವೆ ನೀಡುತ್ತ ಬಂದಿದೆ ಎಂದರು.
ವೈದ್ಯರ ದಿನದ ಅಂಗವಾಗಿ ವೈದ್ಯರಾದ ಡಾ.ಮುದ್ದಾಸೀರ್ ಅಜೀಜ್ ಖಾನ್ ಮತ್ತು ಡಾ.ಕೆ.ಮಮತಾ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಲಯನ್ಸ್ ಇಂಟರ್ ನ್ಯಾಷನಲ್ ಡೈರೆಕ್ಟರ್ ಎಂಡೋರ್ಸಿ ರಾಮಚಂದ್ರನ್ ಪದಗ್ರಹಣ ನೆರವೇರಿಸಿದರು. ಕಾರ್ಯದರ್ಶಿ ಅನುರಾಧಾ, ಖಜಾಂಚಿ ಉಮರಾಣಿ, ಡಾ.ಕೃಷ್ಣೇಗೌಡ, ದೇವೇಗೌಡ, ರಾಜಶೇಖರ್ ಇದ್ದರು.