26ರಂದು ಪಂಜಕ್ಕೆ ಲಯನ್ಸ್ ಗವರ್ನರ್ ಭೇಟಿ

Published on

ಸುಬ್ರಹ್ಮಣ್ಯ: ಕಳೆದ 15 ವರ್ಷಗಳಿಂದ ಪಂಜ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಪಂಜ ಲಯನ್ಸ್ ಕ್ಲಬ್‌ಗೆ ಫೆ. 26ರಂದು ಲಯನ್ಸ್ ಜಿಲ್ಲೆ 317ಡಿ ಗವರ್ನರ್ ಬಿ.ಎಮ್.ಭಾರತಿ ಅಧಿಕೃತ ಭೇಟಿ ನೀಡಿ ಕ್ಲಬ್ ವತಿಯಿಂದ ನಡೆಯಲಿರುವ ಹಲವಾರು ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಲಿದ್ದಾರೆ. ಯೇನೆಕಲ್ಲಿನ ಪುಂಡಿಗದ್ದೆಯಲ್ಲಿ ನೂತನವಾಗಿ ನಿರ್ಮಿಸಿರುವ ದಿ.ಶಿವಪ್ಪ ಗೌಡ ಪಳಂಗಾಯ ಸ್ಮರಣಾರ್ಥ ಬಸ್ ತಂಗುದಾಣ ಲೋಕಾರ್ಪಣೆಗೊಳ್ಳಲಿದೆ. ಕ್ಲಬ್‌ನ ಸದಸ್ಯರ ಸಲಹಾ ಸಭೆಯಲ್ಲಿ ಬಿ.ಎಂ.ಭಾರತಿ ಭಾಗವಹಿಸಲಿದ್ದಾರೆ.

ಪಂಜದ ಲಯನ್ಸ್ ಭವನದಲ್ಲಿ ನಡೆಯುವ ಅಧಿಕೃತ ಭೇಟಿ ಸಮಾರಂಭದಲ್ಲಿ ಹಲವಾರು ಸೇವಾ ಚಟುವಟಿಕೆಗಳು ಹಸ್ತಾಂತರಗೊಳ್ಳಲಿವೆ. ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಗೆ ನಿರಂತರ ಅಕ್ಕಿ ನೀಡುವ ‘ಅನ್ನಭಾಗ್ಯ’ ಯೋಜನೆ, ಬಡರೋಗಿಯೋರ್ವರಿಗೆ ವೀಲ್‌ಚೇರ್ ಹಸ್ತಾಂತರ, ಬಡ ಕುಟುಂಬಗಳಿಗೆ ಆರ್ಥಿಕ ಸಹಕಾರ, ಯುವ ಸಾಧಕರಿಗೆ ಪುರಸ್ಕಾರ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ಪೀಸ್ ಪೋಸ್ಟರ್ ಜಾಗತಿಕ ಮಟ್ಟದ ವಿಶ್ವಶಾಂತಿ ಚಿತ್ರಕಲಾ ಸ್ಪರ್ಧೆಯಲ್ಲಿ ಪಂಜ ಲಯನ್ಸ್ ಕ್ಲಬ್ಬನ್ನು ಪ್ರತಿನಿಧಿಸಿದ ಕುಶಿತ್ ಮಲ್ಲಾರ ಅವರನ್ನು ಗವರ್ನರ್ ಪುರಸ್ಕರಿಸಲಿದ್ದಾರೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ ಪಳಂಗಾಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net