ಜು.30ರಂದು ಲಯನ್ಸ್ ಸಂಸ್ಥೆಯ ಪದಗ್ರಹಣ: ಜಿಲ್ಲಾ ಗವರ್ನರ್ ಡಾ.ಎನ್.ಕೃಷ್ಣೇಗೌಡ ಮಾಹಿತಿ

1 (2)
Published on

ಮಂಡ್ಯ: ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ-317ಜಿ ಸಂಸ್ಥೆಯ ಜಿಲ್ಲಾ ಸಂಪುಟ ಪದಗ್ರಹಣ ಹಾಗೂ ವಾಕ್(ಮಾತು)-ಶ್ರವಣ(ಕಿವಿ) ದೋಷವಿರುವವರಿಗೆ ನಗರದಲ್ಲಿ ಜು.30ರಂದು ಉಚಿತವಾಗಿ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಲಯನ್ಸ್ ಸಂಸ್ಥೆಯ ನೂತನ ಜಿಲ್ಲಾ ಗರ್ವನರ್ ಡಾ.ಎನ್.ಕೃಷ್ಣೇಗೌಡ ತಿಳಿಸಿದರು.

ನಗರದ ಹೊಳಲು ರಸ್ತೆಯಲ್ಲಿನ ಎ ಆ್ಯಂಡ್ ಎ ಕನ್ವೆಂಕ್ಷನ್ ಸೆಂಟ್‌ನಲ್ಲಿ ಆಯೋಜಿಸಿರುವ ಶಿಬಿರ ಬೆಳಗ್ಗೆ 11ಕ್ಕೆ ಆರಂಭಗೊಂಡು ಸಂಜೆ 5ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ವಾಕ್ ಮತ್ತು ಶ್ರವಣ ದೋಷವುಳ್ಳವರು ಶಿಬಿರಕ್ಕೆ ಬಂದು ಉಚಿತವಾಗಿ ತಪಾಸಣೆಗೆ ಒಳಗಾಗಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಿಬಿರದಲ್ಲಿ ಉಚ್ಚಾರಣೆ, ಭಾಷೆ, ಕಲಿಕೆ, ಕಿವಿ ಕೇಳದವರು, ಸೀಳು ತುಟಿ, ಪಾರ್ಶ್ವವಾಯು, ಬುದ್ದಿ ಮಾಂಧ್ಯತೆ, ಧ್ವನಿ ತೊಂದರೆ ಹಾಗೂ ಧ್ವನಿಯಲ್ಲಿ ಏರುಪೇರು ಇರುವವರಿಗೆ ಚಿಕಿತ್ಸೆ ನೀಡಲಾಗುವುದು. ಬಿಪಿಎಲ್ ಕಾರ್ಡ್ ಇದ್ದವರಲ್ಲಿ ಜತೆಯಲ್ಲಿ ಬಿಪಿಎಲ್ ಕಾರ್ಡ್‌ನ್ನು ತರಬೇಕು. ಇದೇ ವೇಳೆ ಬೀದಿಬದಿ ವ್ಯಾಪಾರಿಗಳು ಮತ್ತು ಬಡ ಮಹಿಳೆಯರಿಗೆ ತಳ್ಳುವ ಗಾಡಿ ಹಾಗೂ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು ಎಂದರು.

ಸಂಜೆ 5ಕ್ಕೆ ಜಿಲ್ಲೆಯ ನೂತನ ರಾಜ್ಯಪಾಲರ ಜಿಲ್ಲಾ ಸಂಪುಟ ಪದಗ್ರಹಣ ಸಮಾರಂಭ ನಡೆಯಲಿದೆ. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭಾಗವಹಿಸುವರು. ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಮಾಜಿ ನಿರ್ದೇಶಕ ಬಿಷ್ಣು ಬಜೋರಿಯ ಜಿಲ್ಲಾ ರಾಜ್ಯಪಾಲ ಡಾ.ಎನ್.ಕೃಷ್ಣೇಗೌಡರಿಗೆ ಪದಗ್ರಹಣ ನೆರವೇರಿಸುವರು ಎಂದು ವಿವರಿಸಿದರು.

ಜಿಲ್ಲಾ ಸಂಪುಟ ಸಲಹೆಗಾರ ಕೆ.ದೇವೇಗೌಡ, ಜಿಲ್ಲಾ ಮಾಜಿ ಗರ್ವನರ್ ಜಿ.ಎ.ರಮೇಶ್, ಜಿಲ್ಲಾ ಅಂಬಾಸಿಡರ್ ಆನಂದ್, ಉಪ ರಾಜ್ಯಪಾಲ ಕೆ.ಎಲ್.ರಾಜಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net