ಹುಬ್ಬಳ್ಳಿ: ಲಯನ್ಸ್ ಕ್ಲಬ್ ಆ್ ಹುಬ್ಬಳ್ಳಿ ಸಿಟಿ ವತಿಯಿಂದ ಇಲ್ಲಿಯ ಜಗದೀಶ ನಗರದ 100ಕ್ಕೂ ಹೆಚ್ಚು ಬಡ ವಿದ್ಯಾಥಿರ್ಗಳಿಗೆ ಸ್ಕೂಲ್ ಬ್ಯಾಗ್, ಬಾಟಲ್, ಟಿಫಿನ್ ಬಾಕ್ಸ್ ಸೇರಿ ವಿವಿಧ ವಸ್ತುಗಳ ಕಿಟ್ ವಿತರಣೆ ಮಾಡಲಾಯಿತು.
ಕ್ಲಬ್ ಕಾರ್ಯದರ್ಶಿ ಗುರು ಅಂಗಡಿ, ದಿನೇಶ ಮೇತ್ರಾಣಿ, ಶಂಕರ್ ಕೋಳಿವಾಡ, ಮಹಾಂತೇಶ ಕೋದಾನಪುರ, ಅತುಲ್ ಬಹೇತಿ, ಸಚಿನ್ ಬೇಂದ್ರೆ, ಅಶ್ವಿನಿ ಹೊಸಮನಿ, ಕರುಣಾ ಮಂಕಣಿ, ಸುರೇಖಾ ಮೇತ್ರಾಣಿ, ಶ್ರುತಿ ಅಂಗಡಿ, ಮೀನಾ ಬಾಗಿ, ಅಂಜನಾ ಬಹೇತಿ, ಭಾಗ್ಯ ಕೋದಾನಪುರ, ಇತರ ಸದಸ್ಯರು ಉಪಸ್ಥಿತರಿದ್ದರು.