ಲಯನ್ಸ್ ಕ್ಲಬ್ ಮಂಗಳೂರು ಪ್ರಾಂತ್ಯಾಧ್ಯಕ್ಷರ ಭೇಟಿ

mng--24 Nov Lions
Published on

ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಅಶೋಕನಗರ ಇದರ ಪ್ರಾಂತೀಯ ಅಧ್ಯಕ್ಷರ ಕ್ಲಬ್ ಭೇಟಿ ಕಾರ್ಯಕ್ರಮ ಕದ್ರಿ ಲಯನ್ಸ್ ಅಶೋಕ ಸೇವಾ ಭವನದಲ್ಲಿ ನಡೆಯಿತು.

ಲಯನ್ಸ್ ಜಿಲ್ಲೆ 317 ಡಿ ಪ್ರಾಂತ್ಯ 2 ರ ಪ್ರಾಂತ್ಯಧ್ಯಕ್ಷ ಜಯಪ್ರಕಾಶ್ ಮತ್ತು ಅವರ ಧರ್ಮಪತ್ನಿ ದೀಪಿಕಾ ಜಯಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಚರಣ್ ಆಳ್ವ ಚಿಪ್ಪಾರು ಗುತ್ತು ವಹಿಸಿದ್ದರು. ವಲಯಾಧ್ಯಕ್ಷೆ ಕುಸುಮ ಯು ರಾವ್, ಪ್ರಾಂತ್ಯದ ರಾಯಬಾರಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಲಯನ್ ತಾರಾನಾಥ್ ಶೆಟ್ಟಿ ಬೋಳಾರ್, ಸಂಸ್ಥೆಯ ಕಾರ್ಯದರ್ಶಿ ನರೇಶ್ ಶೆಟ್ಟಿ , ಲಿಯೋ ಕ್ಲಬ್ ಅಶೋಕನಗರದ ಅಧ್ಯಕ್ಷೆ ನಿಧಿ ಯು ರೈ , ಪ್ರಾಂತೀಯ ಲಯನ್ಸ್ ಕ್ಲಬ್ ಗಳ ಅಧ್ಯಕ್ಷರುಗಳಾದ ಪಿ.ಯಸ್. ಆಳ್ವ , ದೀಪಕ್ ಶೆಟ್ಟಿ, ದೇವಿಕಾ ಸೋಮಶೇಖರ್, ಉಷಾ ಪ್ರಭಾಕರ್ ಉಪಸ್ಥಿತರಿದ್ದರು. ಲಯನ್ಸ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್ ನ ಚೇರ್ಮನ್ ಆಡಿ. ನವೀನ್ ಶೆಟ್ಟಿ , ತಾರಾನಾಥ್ ಶೆಟ್ಟಿ ಬೋಳಾರ್ ಶುಭಾಸಂಶನೆಗೈದರು.


ಕಾರ್ಯಕ್ರಮದ ಮುನ್ನ ಸಂತ ಅಲೋಶಿಯಸ್ ಹೈಸ್ಕೂಲ್‌ನಲ್ಲಿ ಪ್ರೌಢಶಾಲಾ ಮಕ್ಕಳಿಗೆ ವೃತ್ತಿ ಮಾರ್ಗದರ್ಶನ, ಯುವ ಸಬಲೀಕರಣ ದ ಬಗೆಗಿನ ವಿಚಾರ ಸಂಕಿರಣ ಲಯನ್ಸ್ ಕ್ಲಬ್ ಅಶೋಕನಗರದ ವತಿಯಿಂದ ನಡೆಸಲಾಯಿತು. ಹಿರಿಯ ಉಪನ್ಯಾಸಕ ರೊನಾಲ್ಡ್ ಪಿಂಟೋ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net