ಹೊಸಕೋಟೆ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ

lions
ಹೊಸಕೋಟೆ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವದಲ್ಲಿ ಪ್ರಾಂತೀಯ, ವಿಭಾಗೀಯ ಹಾಗೂ ಸ್ಥಳಿಯ ಪದಾಧಿಕಾರಿಗಳು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ನಗರ ಹೊರವಲಯದ ಖಾಸಗಿ ಸಭಾಂಗಣದಲ್ಲಿ ತಾಲೂಕು ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ಭಾನುವಾರ ಸಂಜೆ ಅದ್ದೂರಿಯಾಗಿ ನಡೆಯಿತು.
ಮಲ್ಟಿಪಲ್ ಕೌನ್ಸಿಲ್ ಚೇರ್‌ಪರ್ಸನ್ ಬಿ.ಎಸ್.ರಾಜಶೇಖರ್ ಮಾತನಾಡಿ, ಒಂದು ಸಂಸ್ಥೆಯನ್ನು 50 ವರ್ಷಗಳ ಕಾಲ ಕಾಪಾಡಿಕೊಂಡು ಬರುವುದು ಸುಲಭದ ಕೆಲಸವಲ್ಲ, ಪ್ರತಿಯೊಬ್ಬ ಸದಸ್ಯನ ಛಲ, ಕಾರ್ಯದಕ್ಷತೆ ಹಾಗೂ ಸೇವಾ ಮನೋಭಾವ ಇದ್ದಲ್ಲಿ ಸಂಸ್ಥೆ ಉತ್ತುಂಗಕ್ಕೇರಲಿದೆ, ಈ ಸಾಧನೆಯನ್ನು ಹೊಸಕೋಟೆ ಲಯನ್ಸ್ ಕ್ಲಬ್ ಮಾಡಿದೆ ಎಂದರು.
ಲಯನ್ಸ್ ಜಿಲ್ಲಾ ಪಾಲಕ ಸಿ.ಎಂ.ನಾರಾಯಣಸ್ವಾಮಿ ಮಾತನಾಡಿ, ಹೊಸಕೋಟೆ ಲಯನ್ಸ್ ಸಂಸ್ಥೆ ಕೇವಲ 50 ವರ್ಷಗಳ ಸಾಧನೆಯಷ್ಟೇ ಅಲ್ಲದೆ, ತನ್ನದೇ ಕೊಡುಗೆಯಿಂದ 27 ನೂತನ ಶಾಖೆ ತೆರೆದು ಸಾಧನೆ ಮಾಡಿದೆ ಎಂದರು.
ಉಪ ಜಿಲ್ಲಾ ಪಾಲಕ ರಾಜೂ ಚಂದ್ರಶೇಖರ್, ಪ್ರಾಂತೀಯ ಚೇರ್ ಪರ್ಸನ್ ಸಾಶಾ, ವಿಭಾಗ ಚೇರ್ ಪರ್ಸನ್ ಗೋಪಿನಾಥ್, ಲಯನ್ಸ್ ಕ್ಲಬ್ ಆ್ ಹೊಸಕೋಟೆ ಅಧ್ಯಕ್ಷ ಅಬಕಾರಿ ಶ್ರೀನಿವಾಸಯ್ಯ, ಜಿಲ್ಲಾ ನಿರ್ದೇಶ ಜಿ.ಎಸ್.ಮಂಜುನಾಥ್, ಹೊಸಕೋಟೆ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಬೀರಪ್ಪ, ಕಾರ್ಯದರ್ಶಿ ವಿ.ಎನ್.ಮಂಜುನಾಥ್, ಖಜಾಂಚಿ ಎಚ್.ಎಸ್.ಮುರಳೀಧರ್, ಸಂಸ್ಥಾಪಕ ಸದಸ್ಯ ಸಿ.ಎ. ವಿಜಯ್, ಮಾಜಿ ಅಧ್ಯಕ್ಷರಾದ ಅಶೀಕ್ ಕುಮಾರ್, ಕೆ.ಮಂಜುನಾಥ್, ಕಿರನ್ ಕುಮಾರ್, ಬಸವರಾಜ್, ಅನಿಲ್ ಕುಮಾರ್, ಸಂತೋಶ್, ಡಾ.ಸಿ.ಜಯರಾಜ್, ಎಂ.ವೆಂಕಟಸ್ವಾಮಿ, ಷಣ್ಮುಗಂ, ಜಮಿನಿ ಸತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net