ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

IMG_20230718_200510_740.jpg
Published on

ಹುಬ್ಬಳ್ಳಿ: ಲಯನ್ಸ್ ಕ್ಲಬ್ ಆ್ ಹುಬ್ಬಳ್ಳಿ ಸಿಟಿ 31ನೇ ಪದಗ್ರಹಣ ಸಮಾರಂಭ ಈಚೆಗೆ ನಗರದ ಖಾಸಗಿ ಹೋಟೆಲ್ನಲ್ಲಿ ನಡೆಯಿತು.

ಅತಿಥಿಯಾಗಿದ್ದ ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಯಾವುದೇ ಸೇವೆಯು ಅರ್ಥಪೂರ್ಣ ಮತ್ತು ಸಮಾಜಕ್ಕೆ ಉಪಯುಕ್ತವಾಗಿರಬೇಕು. ಕ್ಲಬ್ನ ಕಾರ್ಯಗಳಿಗೆ ತಮ್ಮ ಸಂಸ್ಥೆ ಅಗತ್ಯ ಸಹಕಾರ ನೀಡಲಿದೆ ಎಂದರು.

ಇದೇ ಸಂದರ್ಭದಲ್ಲಿ ಚಳಮಟ್ಟಿ ಸರ್ಕಾರಿ ಶಾಲೆಗೆ ಲಕ್ಷ ರೂ. ಮೌಲ್ಯದ ಎಂಟು ಸ್ಮಾರ್ಟ್ ಬೋರ್ಡ್ಗಳನ್ನು ದೇಣಿಗೆ ನೀಡಿದರು.

ನೂತನ ಅಧ್ಯಕ್ಷರಾಗಿ ಎನ್. ಸಿವರಾಮ ಪ್ರಸಾದ, ಕಾರ್ಯದಶಿರ್ ಗುರು ಅಂಗಡಿ, ಕೋಶಾಧಿಕಾರಿ ಚನ್ನು ಹೊಸಮನಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಮನೋಜ ಮಾಣಿಕ್ ಅವರು ಪ್ರಮಾಣ ವಚನ ಬೋಧಿಸಿದರು.

ಗೋವಿಂದಪ್ಪ ಗೌಡಪ್ಪಗೋಳ ಅತಿಥಿಯಾಗಿ ಪಾಲ್ಗೊಂಡಿದ್ದರು. ನಿರ್ಗಮಿತ ಅಧ್ಯಕ್ಷ ಕಿಶೋರ್ ಮಗಜಿಕೊಂಡಿ ಪ್ರಾಸ್ತಾವಿಕ ಮಾತನಾಡಿ, ಕ್ಲಬ್‌ನ ಸಾಮೂಹಿಕ ಪ್ರಯತ್ನದಿಂದಾಗಿ ಉತ್ತಮ ಕಾರ್ಯಗಳನ್ನು ಮಾಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net