

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಲಯನ್ಸ ಕ್ಲಬ್ ಆಫ್ ಹುಬ್ಬಳ್ಳಿ ಪರಿವಾರದ 2024-25ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು. 13ರಂದು ಸಂಜೆ 7.15ಕ್ಕೆ ಗೋಕುಲ ರಸ್ತೆ ಶುಭೋದಯ ಎಸಿ ಕನ್ವೆಂಷನ್ ಹಾಲ್ನಲ್ಲಿ ಆಯೋಜಿಸಲಾಗಿದೆ.
ಲಯನ್ಸ ಪರಿವಾರದ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ಡಾ. ರವಿ ನಾಡಿಗೇರ ಪದಗ್ರಹಣ ನೆರವೇರಿಸುವರು. ಜಿಲ್ಲಾಧಿಕಾರಿ ದಿವ್ಯಾ ಪ್ರಭು ಹಾಗೂ ನೈಋತ್ಯ ರೈಲ್ವೆ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸಂತೋಷ ಹೆಗಡೆ ಉದ್ಘಾಟಿಸುವರು. ಪರಿವಾರದ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಪಾಲ್ಗೊಳ್ಳುವರು.
ಲಯನ್ಸ ಕ್ಲಬ್ ಆಫ್ ಹುಬ್ಬಳ್ಳಿ ಪರಿವಾರದ ನೂತನ ಅಧ್ಯಕ್ಷರಾಗಿ ಡಾ. ಸಂಜಯ ಗಣೇಶಕರ, ಕಾರ್ಯದರ್ಶಿಯಾಗಿ ಆನಂದ ಭೂಮರಡ್ಡಿ, ಖಜಾಂಚಿಯಾಗಿ ಅಶೋಕ ಗೋಯಲ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಅಧಿಕಾರ ವಹಿಸಿಕೊಳ್ಳುವರು. ಹಾಲಿ ಅಧ್ಯಕ್ಷ ಶ್ರೀಕಾಂತ ಕರಿ ಅಧ್ಯಕ್ಷತೆ ವಹಿಸುವರು.
LIONS CLUB OF,