

ವಿಜಯವಾಣಿ ಸುದ್ದಿಜಾಲ ಗದಗ
ಮಹಿಳೆ ಇಂದು ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕಿಯ, ಶಿಣ, ಕೃಷಿ, ರಾಜಕೀಯ, ಉದ್ಯಮ ಮುಂತಾದ ೇತ್ರದಲ್ಲಿ ಪುರುಷರಿಗೆ ಸಮನಾಗಿ ಸಾಧಿಸಿದ್ದಾಳೆ ಎಂದು ಲಾಯನ್ಸ್ ಕ್ಲಬ್ನ ಮಾಜಿ ಜಿಲ್ಲಾ ಗೌರ್ನರ್ ಆನಂದ ಪೋತ್ನೀಸ್ ಹೇಳಿದರು.
ನಗರದ ಲಾಯನ್ಸ್ ಕ್ಲಬ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕುಟುಂಬದಲ್ಲಿ ಪ್ರೋತ್ಸಾಹ, ಸಾಧಿಸಬೇಕೆಂಬ ಛಲ, ಅವಕಾಶಗಳು, ಶಿಣ ಮತ್ತು ಮೀಸಲಾತಿಯು ಮಹಿಳೆಯನ್ನು ಎತ್ತರದ ಸ್ಥಾನವನ್ನು ತಲುಪಿಸಿ ಸಾಧಕ ಮಹಿಳೆಯನ್ನಾಗಿ ಮಾಡಿವೆ ಎಂದರು.
ಸೌಭಾಗ್ಯ ಮಹಿಳಾ ಬ್ಯಾಂಕ್ ಚೇರಮನ್ ವೀಣಾ ಪೋತ್ನೀಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೃಷಿ ಸಾಧಕಿ ಮಂಗಳಾ ನೀಲಗುಂದ, ವೈದ್ಯಕಿಯ ಕ್ಷೇತ್ರದ ಸಾಧಕಿ ಅನುಪಮಾ ಪಾಟೀಲ, ವಿಕಲಚೇತನ ಮಕ್ಕಳ ಸೇವೆಯಲ್ಲಿ ಸಾಧನೆ ಮಾಡಿದ ಕವಿತಾ ಬೇಲೇರಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಿರಿಜಾ ಬೇವಿನಕಟ್ಟಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೀಣಾ ಪೋತ್ನೀಸ್, ಕ್ರೀಡಾ ಸಾಧಕಿ ಸಂಜನಾ ಚಿಕ್ಕನಗೌಡ್ರ, ಪ್ರತಿಭಾನ್ವಿತ ವಿದ್ಯಾಥಿರ್ನಿ ನೇತ್ರಾ ಸುಲ್ತಾನಪೂರ ಅವರನ್ನು ಸನ್ಮಾನಿಸಲಾಯಿತು.
ಅಶ್ವಿನಿ ನೀಲಗುಂದ, ಅನಿತಾ ಹೆಬಸೂರ, ಮಂಜುಳಾ ಶಿವಪ್ಪಗೌಡ್ರ, ರೂಪಾ ಉತ್ತರಕರ, ವೀಣಾ ಸುಲಾಖೆ, ವಿಜಯಲಕ್ಷಿ$್ಮ ಹೊಳಗುಂದಿ, ಅಪರ್ಣಾ ತೋಟದ, ರಮೇಶ ಶಿಗ್ಲಿ, ಪ್ರವಿಣ ವಾರಕರ, ರಾಜು ಮಲ್ಲಾಡದ, ಸುರೇಖಾ ಮಲ್ಲಾಡದ ಇತರರು ಇದ್ದರು.