

ಮೈಸೂರು: ಬಡವರ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಲಯನ್ಸ್ ಕ್ಲಬ್ 200ಕ್ಕೂ ಹೆಚ್ಚಿ ದೇಶದಲ್ಲಿ ಶ್ರಮಿಸುತ್ತಿದೆ ಎಂದು ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ನ ಅಧ್ಯಕ್ಷೆ ಪ್ಯಾಟಿ ಹಿಲ್ ತಿಳಿಸಿದರು
ಮಧುಮೇಹ, ಕ್ಯಾನ್ಸರ್ ಪೀಡಿತ ಬಡರೋಗಿಗಳಿಗೆ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದೆ. ಕಣ್ಣಿನ ಆಸ್ಪತ್ರೆಗಳು, ರಕ್ತನಿಧಿ ಕೇಂದ್ರಗಳು, ಶಾಲೆಗಳನ್ನು ಸ್ಥಾಪಿಸಿದೆ. ಉತ್ತಮ ನಾಗರಿಕ ಸಮಾಜ ರೂಪಿಸಲು ಶ್ರಮಿಸಿದೆ. ಬಡಜನರ ಏಳಿಗೆಗೆ ದುಡಿಯುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ಲಬ್ ಆರಂಭದಿಂದಲ್ಲೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಮೈಸೂರು ಲಯನ್ಸ್ ಜಿಲ್ಲಾ ವ್ಯಾಪ್ತಿಯ ಕೊಳ್ಳೇಗಾಲದಲ್ಲಿರುವ ಸಂಸ್ಥೆಯ ಕಣ್ಣಿನ ಆಸ್ಪತ್ರೆ ಅಭಿವೃದ್ಧಿಗೆ 50 ಸಾವಿರ ಡಾಲರ್ ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಭರವಸೆ ನೀಡಿದರು.