ಲಯನ್ಸ್ ಕ್ಲಬ್ ಆಫ್ ಹುಬ್ಬಳ್ಳಿ ಪರಿವಾರ ಪದಗ್ರಹಣ 25ರಂದು

srikant kari
Published on

ಹುಬ್ಬಳ್ಳಿ: ಲಯನ್ಸ್ ಕ್ಲಬ್ ಆಫ್ ಹುಬ್ಬಳ್ಳಿ ಪರಿವಾರದ 2023-24ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು. 25ರಂದು ಸಂಜೆ 7.15ಕ್ಕೆ ಗೋಕುಲ ರಸ್ತೆ ಶುಭೋದಯ ಎಸಿ ಕನ್ವೆಂಷನ್ ಹಾಲ್​ನಲ್ಲಿ ಆಯೋಜಿಸಲಾಗಿದೆ.

ನೂತನ ಅಧ್ಯಕ್ಷ ಶ್ರೀಕಾಂತ ಕರಿ, ಕಾರ್ಯದರ್ಶಿ ಸಂತೋಷ ಪಾಟೀಲ, ಖಜಾಂಚಿ ಮೋಹನ ಸುತಾರ ಹಾಗೂ ಪದಾಧಿಕಾರಿಗಳಿಗೆ ಲಯನ್ಸ್ ಪರಿವಾರದ ಪಿಡಿಜಿ ಡಾ. ರವಿ ನಾಡಿಗೇರ ಪ್ರತಿಜ್ಞಾ ವಿಧಿ ಬೋಧಿಸುವರು. ಹು-ಧಾ ಪೊಲೀಸ್ ಆಯುಕ್ತ ಕೆ. ಸಂತೋಷ ಬಾಬು, ಬೆಂಗಳೂರಿನ ಲಕ್ಷ್ಮಿ ಡೈಮಂಡ್ಸ್​ನ ಚೇರ್ಮನ್ ಡಾ. ಚೇತನ ಕುಮಾರ, ಲಯನ್ಸ್ ಕ್ಲಬ್ ಆಫ್ ಹುಬ್ಬಳ್ಳಿ ಪರಿವಾರದ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಪಾಲ್ಗೊಳ್ಳುವರು.

ಕಾರ್ಯಕ್ರಮದಲ್ಲಿ ವಿಶ್ವ ಕುಬ್ಜರ ಕ್ರೀಡಾಕೂಟಕ್ಕೆ ತೆರಳಲಿರುವ ಕಲಘಟಗಿ ತಾಲೂಕಿನ ದೇವಪ್ಪ ಮೋರೆ ಅವರಿಗೆ 25 ಸಾವಿರ ರೂ. ಧನ ಸಹಾಯದ ಚೆಕ್ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net