ಸರ್ಕಾರಿ ಶಾಲೆಗಳಿಗೆ ಲಯನ್ಸ್ ನೆರವು

19srl1
ಶಿರಾಳಕೊಪ್ಪ ಲಯನ್ಸ್ ಮತ್ತು ಲಿಯೋ ಕ್ಲಬ್‌ನಿಂದ ದೇವಿಕೊಪ್ಪ ಸರ್ಕಾರಿ ಶಾಲೆಯ ಮಕ್ಕಳ ನಲಿಕಲಿ ಶಿಕ್ಷಣಕ್ಕೆ ಬೇಕಾಗುವ ಪೀಠೋಪಕರಣ ಹಾಗೂ ಕ್ರೀಡಾ ಸಾಮಗ್ರಿ ವಿತರಿಸಲಾಯಿತು. ರಾಜೀವ್, ಶಿವಕುಮಾರ್, ಶಿವಯೋಗಿ ಗೌಡ, ಎಂ.ಆರ್.ಗಿರೀಶ್, ವೇದಮೂರ್ತಿ, ಮಲ್ಲಪ್ಪ, ರಾಧಾ, ಗೀತಾ, ಆಶಾ, ಶ್ರುತಿ ಇತರರಿದ್ದರು.
Published on

ಶಿರಾಳಕೊಪ್ಪ: ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗಳಿಗೆ ಸಂಪನ್ಮೂಲ ಕೊರತೆ ಇರುವುದರಿಂದ ಅಲ್ಲಿಯ ಅವಶ್ಯಕತೆ ಅರಿತು ಲಯನ್ಸ್ ಕ್ಲಬ್‌ನಿಂದ ಸೇವಾ ಕಾರ್ಯಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಯೋಗಿ ಗೌಡ ತಿಳಿಸಿದರು. ಶಿರಾಳಕೊಪ್ಪ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಆಶ್ರಯದಲ್ಲಿ ಶುಕ್ರವಾರ ದೇವಿಕೊಪ್ಪದ ಸರ್ಕಾರಿ ಶಾಲೆಗೆ ನಲಿಕಲಿ ಪಠ್ಯಕ್ರಮಕ್ಕೆ ಉಪಯುಕ್ತವಾದ ಪೀಠೋಪಕರಣಗಳು ಹಾಗೂ ಕ್ರೀಡಾ ಸಾಮಗ್ರಿ, 30 ಹಿರಿಯ ನಾಗರಿಕರಿಗೆ ಹೊದಿಕೆ ವಿತರಣೆ ಹಾಗೂ ಇತ್ತೀಚೆಗೆ ಮಳೆಹಾನಿಗೆ ಒಳಗಾದ 6 ಕುಟುಂಬಗಳಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಕುಟುಂಬದಲ್ಲಿ ಹಿರಿಯ ನಾಗರಿಕರನ್ನು ನಿರ್ಲಕ್ಷೃದಿಂದ ನೋಡುವ ದೌರ್ಭಾಗ್ಯ ನಮ್ಮದಾಗಿದೆ. ಈ ಸಂದರ್ಭರ್ದಲ್ಲಿ ಅವರಿಗೆ ಮಳೆ ಹಾಗೂ ಚಳಿಯಿಂದ ಸುರಕ್ಷತೆ ಇರಲಿ ಎಂದು ಹೊದಿಕೆಗಳನ್ನು ವಿತರಿಸಲಾಗುತ್ತಿದೆ. ಬಳ್ಳಿಗಾವಿಯ ಅಲ್ಲಮಪ್ರಭು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ವಿತರಿಸಲಾಗಿದೆ. ಅವಶ್ಯಕತೆ ಇದ್ದಲ್ಲಿ ಸೇವೆ ಮಾಡಲು ಲಯನ್ಸ್ ಕ್ಲಬ್ ಸದಾ ಸಿದ್ಧ ಎಂದರು. ಕಾರ್ಯದರ್ಶಿ ಎಂ.ಆರ್.ಗಿರೀಶ್, ಖಜಾಂಚಿ ಯೋಗಿರಾಜ್, ಪ್ರಾಂತೀಯ ಅಧ್ಯಕ್ಷ ವೇದಮೂರ್ತಿ, ಶಿವಕುಮಾರ್, ಸುರೇಶ್, ಉಮೇಶ್, ನಾಗಭೂಷಣ ಗೌಡ, ಶ್ರುತಿ ಗಿರೀಶ್, ಆಶಾ ಮಂಜುನಾಥ, ಗೀತಾ ಶಿವಯೋಗಿ, ರಾಧಾ, ರಾಜೀವ್, ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಲ್ಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net