

ಮೈಸೂರು: ಮೈಸೂರು ಮೃಗಾಲಯದಲ್ಲಿ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ‘ರಕ್ಷಿತ’ ಹೆಸರಿನ ಸಿಂಹಿಣಿಯೊಂದು ಶನಿವಾರ ಮೃತಪಟ್ಟಿದೆ.
21 ವರ್ಷ 4 ತಿಂಗಳ ರಕ್ಷಿತ ಬೆಳಗ್ಗೆ 7ಕ್ಕೆ ಮೃತಪಟ್ಟಿತು. ರಕ್ಷಿತಾ ಸಿಂಹಿಣಿಯು 2004ರ ಏಪ್ರಿಲ್ 1 ರಂದು ನರಸಿಂಹ ಮತ್ತು ಮಾನಿನಿ ಎಂಬ ಸಿಂಹಗಳಿಗೆ ಮೈಸೂರು ಮೃಗಾಲಯದಲ್ಲಿ ಜನಿಸಿತು. ಈ ಸಿಂಹಿಣಿ ಮೃಗಾಲಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಕ್ಷಿತಳಿಗೆ ಒಂದು ವಾರದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ರಕ್ಷಿತಾ ಸಿಂಹಿಣಿಯ ಸಾವಿನಿಂದ ಮೃಗಾಲಯಕ್ಕೆ ಅಪಾರ ನಷ್ಟವಾಗಿದೆ ಎಂದು ಮೃಗಾಲಯ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.