ಬ್ಯಾಂಕ್ ಖಾತೆಗೆ ಆಧಾರ್, ಪಾನ್ ಜೋಡಣೆ ಕಡ್ಡಾಯ

ಚಪ್ಪರದಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಿಕೆವೈಸಿ, ಸಿಕೆವೈಸಿ ಕುರಿತು ಗ್ರಾಹಕರಿಗೆ ಅರಿವು ಮೂಡಿಸಲಾಯಿತು.
ಚಪ್ಪರದಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಿಕೆವೈಸಿ, ಸಿಕೆವೈಸಿ ಕುರಿತು ಗ್ರಾಹಕರಿಗೆ ಅರಿವು ಮೂಡಿಸಲಾಯಿತು.
Published on

ಬೆಟ್ಟದಪುರ: ಬ್ಯಾಂಕ್ ಗ್ರಾಹಕರು ತಮ್ಮ ಖಾತೆಗೆ ಆಧಾರ್, ಪಾನ್ ಸಂಖ್ಯೆ ಜೋಡಣೆಯಾಗಿದೆಯೇ ಎಂಬುದನ್ನು ಖಚಿತ ಮಾಡಿಕೊಳ್ಳಬೇಕು ಎಂದು ಚಪ್ಪರದಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಜಿ.ಮಧುಸೂಧನ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಬುಧವಾರ ಬ್ಯಾಂಕ್ ವತಿಯಿಂದ ಗ್ರಾಹಕರಿಗೆ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ರಿಸರ್ವ್ ಬ್ಯಾಂಕ್‌ನ ಇತ್ತೀಚಿನ ನಿಯಮದ ಪ್ರಕಾರ ಗ್ರಾಹಕರು ತಮ್ಮ ಖಾತೆಗೆ ವಿಳಾಸ ಪುರಾವೆ, ಆಧಾರ್ ಸಂಖ್ಯೆ, ಪಾನ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ಜೋಡಣೆಯನ್ನು ಕಡ್ಡಾಯ ಮಾಡಬೇಕು. ಅಲ್ಲದೆ ಶಾಖೆಗೆ ಭೇಟಿ ನೀಡಿದ ವೇಳೆ ರಿಕೆವೈಸಿ, ಸಿಕೆವೈಸಿ ಆಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು ಎಂದರು.

ಗ್ರಾಹಕರು ಈ ಕೂಡಲೇ ತಮ್ಮ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಜೆರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಬಂದು ತಮ್ಮ ಖಾತೆಗೆ ಜೋಡಣೆ ಮಾಡಿಸಬೇಕು. ಇಲ್ಲದಿದ್ದರೆ ವ್ಯವಹಾರ ಮಾಡಲು ಅಡಚಣೆ ಉಂಟಾಗಬಹುದು ಎಂದರು.

ಬ್ಯಾಂಕ್ ಸಿಬ್ಬಂದಿ ಸಂದೀಪ್, ಪುನೀತ್, ಗ್ರಾಮ ಒನ್ ಕೇಂದ್ರದ ಪ್ರತಿನಿಧಿ ಮಂಜುನಾಥ್, ಗ್ರಾಮದ ಮುಖಂಡರಾದ ಸಿ.ಕೆ.ಕೃಷ್ಣೇಗೌಡ, ಕಾಂತ, ಯೋಗೇಶ್, ನಟೇಶ್, ಗೋವಿಂದೆಗೌಡ, ಜಗದೀಶ್, ಹನುಮ ಭೋವಿ, ಶಿವಣ್ಣ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net