ರಸಗೊಬ್ಬರದ ಜತೆ ಲಿಂಕ್ ಕಡ್ಡಾಯವಲ್ಲ

Linkage with fertilizer is optional
ಹೂವಿನಹಿಪ್ಪರಗಿ ಕೃಷಿ ಕೇಂದ್ರದಲ್ಲಿ 2023-24ನೇ ಸಾಲಿನ ಮುಂಗಾರ ಹಂಗಾಮಿನ ಹೂವಿನಹಿಪ್ಪರಗಿ ಹೂಬಳಿ ಮಟ್ಟದ ಕೃಷಿ ಪರಿಕರ ಮಾರಾಟ ಮಳಿಗೆದಾರರ ಸಭೆಯಲ್ಲಿ ಬಸವನಬಾಗೇವಾಡಿ ಸಹಾಯಕ ಕೃಷಿ ನಿರ್ದೇಶಕ ಎಂ ಎಚ್ ಯರಝೇರಿ ಅವರು ಮಾತನಾಡಿದರು.
Published on

ಹೂವಿನಹಿಪ್ಪರಗಿ: ಮುಂಗಾರು ಹಂಗಾಮಿನಲ್ಲಿ ರೈತರಿಗೆ ಮಾರಾಟ ಮಾಡುವ ರಸಗೊಬ್ಬರದ ಜತೆಗೆ ಇತರ ಪರಿಕರಗಳನ್ನು ಒತ್ತಾಯ ಪೂರ್ವಕವಾಗಿ ಲಿಂಕ್ ಮಾಡದಂತೆ ಪರಿಕರ ಮತ್ತು ರಸಗೊಬ್ಬರ ಮಾರಾಟಗಾರರಿಗೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್. ಯರಝೇರಿ ಹೇಳಿದರು.

ಮಂಗಳವಾರ ಹೂವಿನಹಿಪ್ಪರಗಿ ಕೃಷಿ ಕೇಂದ್ರದಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನ ಹೂವಿನಹಿಪ್ಪರಗಿ ಹೋಬಳಿ ಮಟ್ಟದ ಕೃಷಿ ಪರಿಕರ ಮಾರಾಟ ಮಳಿಗೆದಾರರ ಸಭೆಯಲ್ಲಿ ಅವರು ಮಾತನಾಡಿದರು.

ರೈತರಿಗೆ ಅವಶ್ಯವಿರುವ ಪ್ರಮುಖ ರಸಗೊಬ್ಬರಗಳ ಜತೆಗೆ ಇತರೆ ಪರಿಕರಗಳನ್ನು ರೈತರಿಗೆ ಒತ್ತಾಯ ಪೂರ್ವಕವಾಗಿ ಲಿಂಕ್ ಮಾಡಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೂಳ್ಳಲಾಗುವುದು. ಮಾರಾಟ ಮಳಿಗೆಯಲ್ಲಿ ರಸಗೊಬ್ಬರಗಳ ದಾಸ್ತಾನು ಹಾಗೂ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಸಬೇಕು. ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡದಿರುವುದು ಮಾರಾಟ ಪರವಾನಿಗೆಯನ್ನು ಪ್ರದರ್ಶಿಸುವುದು. ಪರವಾನಿಗೆಯಲ್ಲಿ ಅನುಮತಿ ಪಡೆದ ರಸಗೊಬ್ಬರಗಳನ್ನು ಮಾತ್ರ ಮಾರಾಟ ಮಾಡಬೇಕು. ಅನುಮತಿ ಪಡೆದ ಅಧಿಕೃತ ಗೋದಾಮುಗಳಲ್ಲಿ ಮಾತ್ರ ರಸಗೊಬ್ಬರಗಳನ್ನು ದಾಸ್ತಾನು ಮಾಡುವುದು ಹಾಗೂ ಕಡ್ಡಾಯವಾಗಿ ರೈತರ ಆಧಾರ್‌ನಂಬರ್‌ಗಳನ್ನು ಬಳಸಿ ಪಿಒಎಸ್ ಯಂತ್ರದ ಮೂಲಕವೇ ರಸಗೊಬ್ಬರಗಳನ್ನು ವಿತರಣೆ ಮಾಡುವ ಕುರಿತು ಮಾರಾಟಗಾರರಿಗೆ ಸೂಚಿಸಿದರು.

ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿದರೆ ಮುಲಾಜಿಲ್ಲದೇ ರಸಗೂಬ್ಬರ ಮಾರಾಟ ಪರವಾನಿಗೆ ಪತ್ರವನ್ನು ರದ್ದುಗೊಳಿಸಲಾಗುವುದು. ರಸಗೊಬ್ಬರ ಮಾರಾಟ ಮಾಡುವಾಗ ಚಾಚು ತಪ್ಪದೇ ನಿಯಮ ಪಾಲಿಸಬೇಕು. ಕಡ್ಡಾಯವಾಗಿ ರೈತರಿಗೆ ರಸೀದಿ ನೀಡಬೇಕು ಎಂದರು. ಈ ಸಮಯದಲ್ಲಿ ಸಂತೋಷ ರಾಠೋಡ, ಗೋವಿಂದರೆಡ್ಡಿ ಮೆದಿಕೆನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net