

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಶ್ರೀ ಖಡ್ಗೇಶ್ವರಿ ಸನ್ನಿಧಿಯು ಮುಂದಿನ ಪೀಳಿಗೆಗೆ ದೈವೀ ಪರಂಪರೆಯ ಕೊಂಡಿಯಾಗಿ ಉಳಿದುಕೊಂಡಿದೆ. ಅಂತಹಾ ಕಾರಣಿಕ ಕ್ಷೇತ್ರವಾಗಿರುವ ಇಲ್ಲಿ ಸೇವೆ ಸಲ್ಲಿಸುವವರ ಕುಟುಂಬಕ್ಕೆ ಸಹಿತ ಸರ್ವರಿಗೂ ಖಡ್ಗೇಶ್ವರಿಯ ಅನುಗ್ರಹವಾಗಲಿ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳು ಹೇಳಿದರು.
ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಸನ್ನಿಧಾನಕ್ಕೆ ಮಂಗಳವಾರ ಭೇಟಿ ನೀಡಿ ಬಳಿಕ ಶ್ರೀ ಖಡ್ಗೇಶ್ವರಿ ಜ್ಞಾನಮಂದಿರಕ್ಕೆ ಆಗಮಿಸಿ ಮಂಗಳಾರತಿ ಸ್ವೀಕರಿಸಿ ಆಶೀರ್ವಚನ ನೀಡಿದರು.
ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ ಕೊರ್ನಾಯ ಪದ್ಮನಾಭ ರಾವ್ ಶ್ರೀಗಳನ್ನು ಬರಮಾಡಿಕೊಂಡರು. ದೇವಳ ಅರ್ಚಕರಾದ ಕೇಶವ ಆಚಾರ್ಯ, ನಂದಕುಮಾರ್ ಆಚಾರ್ಯ, ಪಾತ್ರಿಗಳಾದ ಹರಿನಾರಾಯಣ ರಾವ್, ಸುಬ್ರಹ್ಮಣ್ಯ ರಾವ್, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್, ಕೋಶಾಧಿಕಾರಿ ವೈ.ಸುರೇಶ್ ರಾವ್, ಗುರಿಕಾರರಾದ ಬಾಲಪ್ಪ ನಟರಾಜ ರಾವ್ ಪಿ.ಎಸ್, ಮುರುಡಿ ಜಗದೀಶ ರಾವ್, ಟ್ರಸ್ಟಿಗಳಾದ ಶ್ರೀನಿವಾಸ ರಾವ್, ಪಿ.ಎಸ್ ರಾಘವೇಂದ್ರ ರಾವ್, ರವೀಂದ್ರ ರಾವ್ ಪಿ.ಎಚ್, ಕೊರ್ನಾಯ ಗಿರೀಶ್ ರಾವ್, ಶ್ರೀಪತಿ ಆಚಾರ್ಯ, ಬಾಲಕೃಷ್ಣ ವೈದ್ಯ, ಬಾಲಕೃಷ್ಣ ರಾವ್, ಸೇವಾಕರ್ತರಾದ ವಿಜಯ್ ರಾಜ್ ಶೆಟ್ಟಿ ಅವರ ಕುಟುಂಸ್ಥರು ಉಪಸ್ಥಿತರಿದ್ದರು.