ಲಿಂಕ್ ಓಪನ್ ಮಾಡಿದ್ದೆ ತಡ ಹೋಯ್ತು 2.72 ಲಕ್ಷ ರೂ.

22
Published on

ಹಾವೇರಿ: ವ್ಯಕ್ತಿಯೊಬ್ಬನ ಮೊಬೈಲ್‌ಗೆ ಲಿಂಕ್‌ವೊಂದನ್ನು ಕಳುಹಿಸಿ 2.72 ಲಕ್ಷ ರೂ. ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ ಕುರಿತು ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಬಂಕಾಪುರದ ಹಜರತಸಾಬ ಹನಿಫಸಾಬ ತರೀನ್ (35) ಎಂಬುವರಿಗೆ ಮೋಸ ಮಾಡಿರುವುದು.
ಇವರ ಮೊಬೈಲ್ ನಂಬರ್‌ಗೆ ಯಾರೋ ಅಪರಿಚಿತ ವ್ಯಕ್ತಿ ಆಪ್ ಆಪ್ಕ ಫೈನ್ ಟೀಮ್ ಐಡಿಎಫ್‌ಸಿ ಬ್ಯಾಂಕ್ ಎಂದು ಲಿಂಕ್‌ವೊಂದನ್ನು ಕಳುಹಿಸಿದ್ದಾನೆ. ಲಿಂಕ್ ಓಪನ್ ಮಾಡುತ್ತಿದ್ದಂತೆ ಖಾತೆಯಿಂದ 2.72 ಲಕ್ಷ ರೂ. ಹಣ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗಿದೆ ಎಂದು ಹಜರತಸಾಬ ತರೀನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net