ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ ಪೊಲೀಸರು

16012022 Lingsugur weekend curfiw
Published on

ಲಿಂಗಸುಗೂರು: ಪಟ್ಟಣದಲ್ಲಿ ವಾರಾಂತ್ಯ ಕರ್ಫ್ಯೂ ಪ್ರಯುಕ್ತ ಆಸ್ಪತ್ರೆ, ಔಷಧ ಅಂಗಡಿ, ಹಾಲು, ಹಣ್ಣು, ತರಕಾರಿ, ಕಿರಾಣಿ ಹೊರತು ಪಡಿಸಿ ಇತರ ವ್ಯಾಪಾರ-ವಹಿವಾಟು ಬಂದ್ ಆಗಿದ್ದವು.

ಸಾರಿಗೆ ಸಂಚಾರ ಎಂದಿನಂತೆ ಇತ್ತು. ಮಾಸ್ಕ್ ಧರಿಸದ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿದರು. ಬಸ್ ನಿಲ್ದಾಣ ವೃತ್ತ, ಗಡಿಯಾರ ವೃತ್ತ, ಬಸವಸಾಗರ ವೃತ್ತ, ಬೈಪಾಸ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವಹಿವಾಟು ಸ್ಥಗಿತವಾಗಿತ್ತು. ಇದರಿಂದಾಗಿ ಜನ ಸಂಚಾರ ವಿರಳವಾಗಿತ್ತು. ಬೆಳಗ್ಗೆ ಬೀದಿ ಬದಿ ತರಕಾರಿ ಮಾರಾಟಕ್ಕೆ ಮತ್ತು ಆಯ್ದ ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಅವಕಾಶ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net