

ಮದ್ದೂರು: ಒಕ್ಕಲಿಗ ಜನಾಂಗದ ಸಂಘಟನೆ ಜಾಗೃತಿ ಹಾಗೂ ಅಭ್ಯುದಯಕ್ಕಾಗಿ ಶ್ರೀ ಕಾಲಭೈರವ ಕ್ರಿಯಾಶೀಲ ಒಕ್ಕಲಿಗ ಕಾರ್ಯಪಡೆಯ ಅಧ್ಯಕ್ಷರಾಗಿ ಎಂ.ಪಿ.ಲಿಂಗೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಎಸ್.ದಯಾನಂದ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಕಾರ್ಯಪಡೆಯ ನೂತನ ಪದಾಧಿಕಾರಿಗಳು ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಪಡೆ ತಾಲೂಕು, ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಹಂತಗಳಲ್ಲಿ 3 ಹಂತಗಳಲ್ಲಿ ಕಾರ್ಯನಿರ್ವಹಿಸಲಿದೆ. ಪ್ರತಿ ಗ್ರಾಮ ಪಂಚಾಯಿತಿಯಿಂದ ಒಬ್ಬ ಕ್ರಿಯಾಶೀಲ ಬಂಧು ಹಾಗೂ ಪ್ರತಿ ವಾರ್ಡ್‌ನಿಂದ ಒಬ್ಬ ಕ್ರಿಯಾಶೀಲ ಸದಸ್ಯರನ್ನು ಆಯ್ಕೆ ಮಾಡಲಾಗುವುದು ಎಂದರು.
ನೂತನ ಅಧ್ಯಕ್ಷ ಎಂ.ಪಿ.ಲಿಂಗೇಗೌಡ ಮಾತನಾಡಿ, ನಾಯಕತ್ವ ವಿಕಸನ, ವ್ಯಕ್ತಿತ್ವ ನಿರ್ಮಾಣ ಹಾಗೂ ಒಕ್ಕಲಿಗ ಜನಾಂಗದ ಇತಿಹಾಸ ಮತ್ತು ಸರ್ಕಾರಿ ಯೋಜನೆಗಳ ಕುರಿತು ತರಬೇತಿ ನೀಡಲಾಗುವುದು ಹಾಗೂ ಕಾರ್ಯಪಡೆಯು ಮುಂದಿನ ದಿನಗಳಲ್ಲಿ ಜನಾಂಗದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಲಾಗುವುದು ಎಂದರು.
ಕಾರ್ಯಪಡೆಯ ಪ್ರಧಾನ ಕಾರ್ಯದರ್ಶಿ ಸಿ.ಎಂ. ಕ್ರಾಂತಿಸಿಂಹ ಮಾತನಾಡಿ, ಜನಾಂಗದ ಸಂಘಟನೆ ಜಾಗೃತಿ ಮೂಲಕ ಅಭ್ಯುದಯಕ್ಕೆ ಶ್ರಮಿಸುತ್ತಾ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಾರ್ಯಪಡೆ ವಿಸ್ತರಿಸುವ ಉದ್ದೇಶವಿದ್ದು, ಕಾರ್ಯಪಡೆಗೆ ಮಾರ್ಗದರ್ಶನ ನೀಡುವ ಸಂಸ್ಥೆಯಾಗಿ ಹೊನ್ನೇರು ಟ್ರಸ್ಟ್ ಕಾರ್ಯನಿರ್ವಹಿಸಲಿದೆ ಎಂದರು.
ಪದಾಧಿಕಾರಿಗಳ ಆಯ್ಕೆ: ಎಸ್.ದಯಾನಂದ್ ಗೌರವಾಧ್ಯಕ್ಷ, ಎಂ.ಪಿ. ಲಿಂಗೇಗೌಡ ಅಧ್ಯಕ್ಷ, ಸಿ.ಎಂ. ಕ್ರಾಂತಿಸಿಂಹ ಪ್ರಧಾನ ಕಾರ್ಯದರ್ಶಿ, ಆರ್.ಪ್ರಸನ್ನ, ಜನಾರ್ದನ್, ಅವಿನಾಶ್ ಸಂಘಟನಾ ಕಾರ್ಯದರ್ಶಿ, ಗೋಪಾಲ್, ಪ್ರದೀಪ್, ಉಪಾಧ್ಯಕ್ಷರು: ಮಂಜುನಾಥ್, ಶಿವಕುಮಾರ, ಮಧುಸೂದನ್ ಉಪಾಧ್ಯಕ್ಷರು,ಚಂದ್ರಹಾಸ್ ಖಜಾಂಚಿ, ನಿರ್ದೇಶಕರಾಗಿ, ಕೆ. ರವಿಕುಮಾರ್, ಬಸವರಾಜ್, ಎಂ.ಎನ್.ಪ್ರಸನ್ನಕುಮಾರ್, ನಳಿನಾ, ತಿಮ್ಮಯ್ಯ, ಅಪ್ಪಾಜಿಗೌಡ, ಚೇತನ್, ಚಂದ್ರು, ಸುಂದರ, ಜಯರಾಮ್, ಯೋಗಾನಂದ್ , ಪ್ರಸನ್ನ, ನ.ಲಿ. ಕೃಷ್ಣ ಅವರನ್ನು ಆಯ್ಕೆ ಮಾಡಲಾಯಿತು.