

ಬೆಳಗಾವಿ: ಇಲ್ಲಿನ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಲಿಂಗಾಯತ ಮಹಿಳಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಶೇಗುಣಸಿಯ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ‘ಕಷ್ಟದಲ್ಲಿರುವವನ ಕಣ್ಣೀರು ಒರೆಸುವುದೇ ನಿಜವಾದ ಧರ್ಮ. ಮನುಷ್ಯ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ತನ್ನ ಜೀವನ ಸಾರ್ಥಕವಾಗಿಸಿಕೊಳ್ಳಬೇಕು’ ಎಂದರು.
ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಪ್ರಗತಿ ಹೊಂದಲು ಶರಣ ಸಾಹಿತ್ಯ ಮಾರ್ಗವನ್ನು ತೋರಿಸುತ್ತದೆ. ಶರಣರ ನುಡಿಗಳು ನಮ್ಮನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತವೆ. ನಾವು ಮಕ್ಕಳು ಮತ್ತು ಯುವಕರಿಗೆ ಧರ್ಮದ ತಿರುಳು ತಿಳಿಸಬೇಕು. ಅವರಲ್ಲಿ ನಮ್ಮ ಸಂಸ್ಕೃತಿಯ ಬೇರುಗಳು ಆಳವಾಗಿ ನೆಲೆಯೂರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿದರು. ಹಾವೇರಿಯ ವಿಶ್ವವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವೆಯಾದ ಡಾ.ವಿಜಯಲಕ್ಷ್ಮಿ ಪುಟ್ಟಿ ಅವರನ್ನು ಸತ್ಕರಿಸಲಾಯಿತು.
ನೈನಾ ಗಿರಿಗೌಡರ ಸ್ವಾಗತಿಸಿದರು. ಸಂಸ್ಥಾಪಕಿ ಶೈಲಜಾ ಬಿಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವೇರಿ ಕಿಲಾರಿ ನಿರೂಪಿಸಿದರು. ಸುಖೇಶಿನಿ ಪಾಟೀಲ್ ವಂದಿಸಿದರು.