ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕ ಮಾನ್ಯತೆ ನೀಡಬೇಕು

22 dec tnp 02
filter: 0; fileterIntensity: 0.0; filterMask: 0; module: j; hw-remosaic: 0; touch: (0.5197917, 0.5197917); modeInfo: ; sceneMode: Auto; cct_value: 0; AI_Scene: (200, -1); aec_lux: 176.92618; hist255: 0.0; hist252~255: 0.0; hist0~15: 0.0;
Published on

ತಿ.ನರಸೀಪುರದಲ್ಲಿ ಧರ್ಮ ಜಾಗೃತಿ ಸಮಾವೇಶ

ತಿ.ನರಸೀಪುರ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿ ಉಪಾಧ್ಯಕ್ಷ ಜಿ.ಬಿ.ಪಾಟೀಲ್ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾನುವಾರ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ್ದ ಲಿಂಗಾಯತ ಧರ್ಮ ಕಾಯಕ ಸಂಸ್ಕೃತಿಗೆ ಮಹತ್ವ ನೀಡಿದೆ. ದುಡಿದು ತಿನ್ನು, ಇತರರಿಗೂ ಹಂಚು ಎನ್ನುವ ನೀತಿ ಪ್ರತಿಪಾದಿಸಿದೆ. ವಚನ ಸಾಹಿತ್ಯವೇ ನಮ್ಮ ಪವಿತ್ರ ಗ್ರಂಥವಾಗಿದೆ ಎಂದರು. ನಮ್ಮಲ್ಲಿರುವ ಆತ್ಮ ಸಾಕ್ಷಿಯಲ್ಲಿ ನಿಜವಾದ ದೇವರು ಇದ್ದಾನೆ. ದೇವರಿಗಿಂತ ಮೊದಲು ಬಸವಣ್ಣನವರ ಸ್ಮರಣೆಯಾಗಬೇಕು. ಹಾಗಾಗಿ ನಾವು ಮೇಲು ಕೀಳೆಂಬ ಭಾವನೆ ತೊರೆದು ಭಕ್ತಿ ಭಂಡಾರಿ ಬಸವಣ್ಣನವರು ಬೋಧಿಸಿದ ತತ್ವ ದಲ್ಲಿಯೇ ನಡೆಯಬೇಕು ಎಂದು ಜಿ.ಬಿ.ಪಾಟೀಲ್ ಹೇಳಿದರು.

20 ಸಾವಿರ ಸದಸ್ಯರು ನೋಂದಣಿ:ಸಂಘಟನೆ ಜಿಲ್ಲಾಧ್ಯಕ್ಷ ಮಹದೇವಪ್ಪ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕ ಮಾನ್ಯತೆ ದೊರಕಬೇಕು. ಬೌದ್ಧ, ಜೈನ ಹಾಗೂ ಸಿಖ್ ಧರ್ಮಗಳಿಗೆ ದೊರೆತ ಗೌರವಾದರ ನಮಗೂ ಪ್ರಾಪ್ತಿ ಆಗಬೇಕು ಎಂಬ ನಿಟ್ಟಿನಲ್ಲಿ ಮಹಾಸಭಾ ಹೋರಾಟ ನಡೆಸುತ್ತಿದೆ ಎಂದರು. ರಾಜ್ಯದಲ್ಲಿ 20 ಜಿಲ್ಲಾ ಕೇಂದ್ರಗಳಲ್ಲಿ ನಗರ, ಪಟ್ಟಣ ಹಾಗೂ ಗ್ರಾಮ ಘಟಕಗಳನ್ನು ಆರಂಭಿಸಿದ್ದೇವೆ. 20 ಸಾವಿರ ಸದಸ್ಯರು ನೋಂದಣಿಯಾಗಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲಿ 7 ಜಿಲ್ಲಾ ಘಟಕ ಆರಂಭಿಸಿದ್ದೇವೆ. ಮುಂಬರುವ ದಿನಗಳಲ್ಲಿ ತೆಲಂಗಾಣ ಹಾಗೂ ಆಂಧ್ರದಲ್ಲೂ ಸಂಘಟನೆ ಕಾರ್ಯ ಚುರುಕುಗೊಳ್ಳಲಿದೆ ಎಂದು ವಿವರಿಸಿದರು.

ಪ್ರತ್ಯೇಕ ಅಲ್ಲ: ಎಂ.ಎಲ್. ಹುಂಡಿ ವಿರಕ್ತ ಮಠದ ಶ್ರೀ ಗೌರಿಶಂಕರ ಸ್ವಾಮೀಜಿ ಮಾತನಾಡಿ, ಜಾಗತಿಕ ಲಿಂಗಾಯತ ಸಭಾ- ವೀರಶೈವ ಮಹಾಸಭಾ ಪ್ರತ್ಯೇಕ ಎಂದು ಕೆಲವರು ಹೇಳುತ್ತ ಇದ್ದಾರೆ. ಇವೆರಡೂ ಒಂದೇ ಎಂದರು. ಬಸವಣ್ಣನವರ ಆದರ್ಶ, ತತ್ವ ,ಸಿದ್ಧಾಂತ, ಶರಣರ ಪರಂಪರೆ ಪ್ರತಿಪಾದಿಸಿ ಆ ಮಾರ್ಗದಲ್ಲಿ ಸಾಗುವುದೇ ಮಹಾಸಭಾಗಳ ಉದ್ದೇಶ ಎಂದರು. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ಸಮುದಾಯದ ಸಂಘಟನೆಗಳನ್ನು ಒಡೆಯಲು ಯತ್ನ ಮಾಡುತ್ತಿವೆ. ನಮ್ಮದೇನಿದ್ದರೂ ಬಸವಮಾರ್ಗ, ಮೌಢ್ಯದ ವಿರುದ್ಧ ಹೋರಾಟ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಮೈಸೂರು ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಷಟ್‌ಸ್ಥಳ ಧ್ವಜಾರೋಹಣ ನೆರವೇರಿಸಿದರು. ಬಸವತತ್ವ ಪ್ರಚಾರದ ಮಾರ್ಗದರ್ಶಕರಾದ ಶ್ರೀ ಬಸವಯೋಗಿ ಪ್ರಭು, ಸೇತುವೆ ಮಠದ ಶ್ರೀ ಸಹಜಾನಂದ ಸ್ವಾಮೀಜಿ ಮಾತನಾಡಿದರು. ಇದೇ ಸಂದರ್ಭ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು.

ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಂ.ಶಿವಮಲ್ಲಪ್ಪ, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಎಂ.ರವಿ ತೊಟ್ಟವಾಡಿ, ಪ್ರಧಾನ ಕಾರ್ಯದರ್ಶಿ ಟಿ.ಎನ್.ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಸೀಹಳ್ಳಿ ಶಿವಮಲ್ಲಪ್ಪ, ಮುಖಂಡರಾದ ಕೆ.ಜಿ.ಶಿವಪ್ರಸಾದ್, ಎಂ.ಮಹೇಶ್ ಕುಮಾರ್, ಡಿ.ಎಲ್. ಮಹದೇವಪ್ಪ, ನಂಜುಂಡಸ್ವಾಮಿ(ಕುಮಾರ), ಗುರುಸ್ವಾಮಿ, ತಲಕಾಡು ವೀರೇಶ್, ಕೆ.ಎಸ್. ಶಿವಕುಮಾರ್, ಗೌಡ್ರ ಬಸವರಾಜಪ್ಪ , ಕೆ.ಎಸ್. ಮಹದೇವಸ್ವಾಮಿ, ಮಾಡ್ರಳ್ಳಿ ನಾಗಪ್ಪ, ದೊಡ್ಡನಹುಂಡಿ ನಂಜುಂಡಸ್ವಾಮಿ, ಮಾಯಪ್ಪ, ಮಲ್ಲಪ್ಪ, ತೊಟ್ಟವಾಡಿ ಶಿವಕುಮಾರ ಸ್ವಾಮಿ, ಚಂದ್ರಧರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net