ನ. 11ರಂದು ಕೂಡಲಸಂಗಮದಲ್ಲಿ ಲಿಂಗಾಯತ ಮಠಾಧೀಶರ ಔತಣಕೂಟ

Lingayat Mathadhis' banquet at Kudalasangama on Nov. 11
ಮಹಾದೇಶ್ವರ ಸ್ವಾಮೀಜಿ
Published on

ಕೂಡಲಸಂಗಮ : ಬಸವ ಸಂಸ್ಕೃತಿ ಅಭಿಯಾನ ಯಶಸ್ಸಿನ ಹಿನ್ನೆಲೆಯಲ್ಲಿ ನ. 11ರಂದು ಕೂಡಲಸಂಗಮದಲ್ಲಿ ಲಿಂಗಾಯತ ಮಠಾಧೀಶರ ಔತಣಕೂಟವನ್ನು ಇಲ್ಲಿಯ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಹೇಳಿದರು.

ಕೂಡಲಸಂಗಮ ಬಸವ ಧರ್ಮ ಪೀಠದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವ ಸಂಸ್ಕೃತಿ ಅಭಿಯಾನದ ಪರ ಇರುವ, ಬಸವ ತತ್ವದ ಸ್ವಾಮೀಜಿಗಳು ಈ ಔತಣಕೂಟದಲ್ಲಿ ಭಾಗವಹಿಸುವರು. 250ಕ್ಕೂ ಅಧಿಕ ಮಠಾಧೀಶರು ಈ ಸಭೆಗೆ ಬರುವರು. ಅಂದೇ ಮುಂದಿನ ಕಾರ್ಯಕ್ರಮದ ರೂಪರೇಷೆಗಳನ್ನು ಚರ್ಚಿಸಲಾಗುವುದು ಎಂದರು.

ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಸಾಣೆಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ, ಬಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು, ನಿಜಗುಣಾನಂದ ಸ್ವಾಮೀಜಿ ಮುಂತಾದ ಶ್ರೀಗಳು ಭಾಗವಹಿಸುವರು. ಅಂದು ಕೈಗೊಳ್ಳುವ ನಿರ್ಣಯ ನಿಗೂಢವಾಗಿದ್ದು, ಅಂದೇ ತಿಳಿಸುತ್ತೇವೆ ಎಂದರು.

ಬಸವ ಸಂಸ್ಕೃತಿ ಅಭಿಯಾನ ವೇಳೆ ಸಮಾರೋಪ ಸಮಾರಂಭಕ್ಕೆ ಹೋಗಬಾರದು ಎಂದು ಸಿಎಂಗೆ ವೀರಶೈವ ಲಿಂಗಾಯತ ಶ್ರೀಗಳು ಎಚ್ಚರಿಗೆ ನೀಡಿದರಲ್ವ? ಎಂಬ ಸುದ್ದಿಗಾರರ ಪ್ರಶ್ನೆಗೆ ಸಮಾರಂಭಕ್ಕೆ ಹೋಗಬಾರದೆಂದು ಆದೇಶ ಮಾಡೋದು, ಕಟ್ಟಪ್ಪಣೆ ಮಾಡೋದನ್ನು ಯಾವ ಸ್ವಾಮೀಜಿಗಳು ಮಾಡಬಾರದು. ಅದು ಅವರ ವಿವೇಚನೆಗೆ ಬಿಟ್ಟಿದ್ದು. ಸಿದ್ದರಾಮಯ್ಯನವರು ಬಸವಣ್ಣನವರ ಅನುಯಾಯಿಗಳು, ನಿರ್ಧಾರ ಮಾಡಿಕೊಂಡೆ ಕಾರ್ಯಕ್ರಮಕ್ಕೆ ಬಂದರು ಎಂದರು.

ಕನ್ನೇರಿ ಶ್ರೀಗಳು ಹೇಳ್ತಾರೆ ಬಸವ ತತ್ವದ ಮಠಾಧೀಶರು ವಿಭೂತಿ ಧರಿಸೋದಿಲ್ಲ ಅಂತ. ಎಲ್ಲರೂ ನಾವು ವಿಭೂತಿ ಧಾರಣೆ ಮಾಡಿಕೊಳ್ಳುವವರೇ. ಅವರ ಹಾಗೆ ಕುಂಕುಮ ಹಚ್ಚಿಕೊಳ್ಳೋದಿಲ್ಲ. ಲಿಂಗಾಯತ ಮಠಾಧೀಶರ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿ ಬೈದಿರುವುದು ತಪ್ಪು. ಯಾವ ಮಠಾಧೀಶರು ಅಂತಹ ಶಬ್ದ ಬಳಸಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net