ಹುಬ್ಬಳ್ಳಿ: ವಚನ ದರ್ಶನ ಪುಸ್ತಕಕ್ಕೆ ಪ್ರತಿಯಾಗಿ ವಚನ ದರ್ಶನ ಮಿಥ್ಯ- ಸತ್ಯ ಕೃತಿ ಬೆಂಗಳೂರಿನಲ್ಲಿ ಬಿಡುಗಡೆಯಾದ ನಂತರ ರಾಜ್ಯಾದ್ಯಂತ ಬಿಡುಗಡೆ ಮಾಡುವುದು. ಲಿಂಗಾಯತ ಮಠಾಧೀಶರ ಒಕ್ಕೂಟ ಹಾಗೂ ಮಹಾಸಭಾದ ನೇತೃತ್ವದಲ್ಲಿ ನಡೆಸಲು ತೀರ್ಮಾನಿಸಲಾಗಿರುವ ಲಿಂಗಾಯತ ಧರ್ಮ ಜಾಗತಿ ಕಾರ್ಯಕ್ರಮವನ್ನು ಆಯೋಜಿಸುವುದು ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಟಕದ ಅಧ್ಯ ಎಂ.ವಿ. ಗೊಂಗಡಶೆಟ್ಟಿ ತಿಳಿಸಿದ್ದಾರೆ.
ನಗರದ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಮಹಾಸಭಾ ಜಿಲ್ಲಾ ಟಕದ ಸಭೆಯ ನಂತರ ಅವರು ಮಾತನಾಡಿದರು.
ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಪಡೆಯಲಾಗಿದೆ. ಮುಂದೆ ಕೈಗೊಳ್ಳುವ ಕಾರ್ಯಕ್ರಮಗಳ ವಿವರ ನಂತರ ತಿಳಿಸಲಾಗುವುದು ಎಂದು ಹೇಳಿದರು.
ಮಹಾಸಭಾ ಕೋಶಾಧ್ಯಕ್ಷ ಎಸ್.ವಿ. ಕೊಟಗಿ, ಮಹಿಳಾ ಟಕದ ಸವಿತಾ ನಡಕಟ್ಟಿ, ಯುವ
ಟಕದ ಚನ್ನಪ್ಪಗೌಡ ಪಾಟೀಲ, ಶಂಕರ ಕೋಳಿವಾಡ, ಸಿದ್ಧರಾಮಣ್ಣ ನಡಕಟ್ಟಿ, ಪ್ರಭು ನಡಕಟ್ಟಿ, ಡಾ. ಪ್ರಕಾಶ ಮುನ್ನೋಳಿ, ಪ್ರೊ. ಬಸವರಾಜ ಕೆಂಧೂಳಿ, ಉಮಾ ಹುಲಿಕಂತಿಮಠ, ತಾರಾದೇವಿ ವಾಲಿ, ಶಿವರಾಜ ಅರಕೇರಿ,
ಶಾರದಾ ಪಾಟೀಲ, ಎಸ್.ವಿ. ಪಾಟೀಲ, ಮಲ್ಲಿಕಾರ್ಜುನ ಬಾಗೇವಾಡಿ, ಬಸವರಾಜ ಹುಲ್ಲೋಳ್ಳಿ, ಪ್ರಭಾ ಎರೆಶೀಮಿ, ಡಾ. ಸ್ನೇಹಾ ಭೂಸನೂರ, ಶಾಂತಾ ಗೊಂಗಡಶೆಟ್ಟಿ, ಚಿಂತಾಮಣಿ ಸಿಂದಗಿ, ಅನುಪಮಾ ಪಾಟೀಲ, ಜಯಶ್ರೀ ಹಿರೇಮಠ, ಉಮಾ ಹಂಪಣ್ಣವರ, ಮುಂತಾದವರು ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಬಿ.ಎಲ್. ಲಿಂಗಶೆಟ್ಟರ ಸ್ವಾಗತಿಸಿದರು. ಬಸವ ಪರಿಸರ ಸಂರಣಾ ಸಮಿತಿಯ ಕಾರ್ಯದರ್ಶಿ ಡಾ. ಸುರೇಶ ಹೊರಕೇರಿ ನಿರೂಪಿಸಿದರು. ದಾಕ್ಷಾಯಣಿ ಕೋಳಿವಾಡ ವಂದಿಸಿದರು.