

ಹುಬ್ಬಳ್ಳಿ: ಧಾರವಾಡದಲ್ಲಿ ಇತ್ತೀಚೆಗೆ ಜರುಗಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ನಿರ್ದೇಶಕರ ಚುನಾವಣೆಯಲ್ಲಿ ತಾಲೂಕಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಯುವ ಮುಖಂಡ ರವಿಕುಮಾರ ಬಡ್ನಿ ಅವರು ನಗರದ ಮೂರುಸಾವಿರ ಮಠಕ್ಕೆ ಭೇಟಿ ನೀಡಿ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿದರು.
ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಸಮಾಜದ ಹಿರಿಯರಾದ ತಾರಾದೇವಿ ವಾಲಿ, ಜಯಲಕ್ಷ್ಮಿ ಉಮ್ಮುಚಗಿ, ಅನಸೂಯ ಅರಕೇರಿ, ಸುನಂದ ಹೊನ್ನಳ್ಳಿ, ಚನ್ನಬಸಪ್ಪ ಧಾರವಾಡಶೆಟ್ಟರ್, ಅಂದಾನಪ್ಪ ಹರದಾರಿ, ಮಲ್ಲಿಕಾರ್ಜುನ ಶಿರಗನ್ನವರ, ಜಗದೀಶ ಕಾಳನ್ನವರ್, ಈರಪ್ಪ ಎಮ್ಮಿ, ಡಿ.ಸಿ. ಗಿರೀಶ್ ಉಪಸ್ಥಿತರಿದ್ದರು.