

ಹುಬ್ಬಳ್ಳಿ: ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದ ಸಂಘಟನೆ ಪ್ರಾಮಾಣಿಕ, ಪ್ರಾಂಜಲ, ಅಂತಃಕರಣ ಮನಸ್ಸಿನಿಂದ ಆಗಬೇಕು, ಧರ್ಮದ ಆಚರಣೆಗಳ ಅರಿವು ಮೂಡಿಸಬೇಕು ಎಂದು ಶರಣ ಚಿಂತಕ ಡಾ. ಶಂಭು ಹೆಗಡಾಳ ಹೇಳಿದರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಟಕದ ಸಭೆ ಹಾಗೂ ಹೊಸ ಯುವ ಟಕ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಯುವಕರಿಗೆ ಸಂಟನೆಯ ಮಾರ್ಗದರ್ಶನ ನೀಡಬೇಕು. ಧರ್ಮದ ಆಚರಣೆಗಳ ಒತ್ತಡ ಹೇರಬಾರದು. ಆಚರಣೆಗಳ ಅರಿವು ಮೂಡಿಸಿ, ಪರಿವರ್ತನೆಗೆ ಅವಕಾಶ ನೀಡಬೇಕು. ಧರ್ಮದ ಸಂಟನೆಯಲ್ಲಿ ತೊಡಗಿಸಿಕೊಂಡವರು ತಾಳ್ಮೆ, ಸಹನೆ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.
ಮಹಾಸಭಾ ಜಿಲ್ಲಾಧ್ಯಕ್ಷ ಎಂ.ವಿ. ಗೊಂಗಡಶೆಟ್ಟಿ ಅಧ್ಯತೆ ವಹಿಸಿದ್ದರು. ಯುವ ಟಕದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧನೆ ಮಾಡಿದರು.
ಪ್ರಧಾನ ಕಾರ್ಯದರ್ಶಿ ಬಿ.ಎಲ್. ಲಿಂಗಶೆಟ್ಟರ, ಕೋಶಾಧ್ಯ ಎಸ್.ವಿ. ಕೊಟಗಿ, ಬಸವ ಪರಿಸರ ಸಂರಣಾ ಸಮಿತಿಯ ಕಾರ್ಯದರ್ಶಿ ಡಾ. ಸುರೇಶ ಹೊರಕೇರಿ, ಬಸವಂತಪ್ಪ ತೋಟದ, ಡಾ. ಪ್ರಕಾಶ ಮುನ್ನೋಳಿ, ಪ್ರೊ. ವಿ.ಬಿ. ಮಾಗನೂರ, ಶಿವರುದ್ರಗೌಡ ಪಾಟೀಲ, ಎಸ್.ಕೆ. ಕುಂದರಗಿ, ಬಿ. ಹೊಸಗೌಡ್ರ, ಬಸವರಾಜ ಹುಲ್ಲೋಳ್ಳಿ, ಎಸ್.ವಿ. ಪಾಟೀಲ, ಚಿಂತಾಮಣಿ ಸಿಂದಗಿ, ಉಮಾ ಹುಲಿಕಂತಿಮಠ, ಶಿವರಾಜ ಅರಕೇರಿ ಮುಂತಾದವರು ಇದ್ದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಯುವ ಟಕದ ಅಧ್ಯರಾಗಿ ಚನ್ನಪ್ಪಗೌಡ ಪಾಟೀಲ, ಉಪಾಧ್ಯರಾಗಿ ಸುಶೀಲ ನಿಡವಣಿ, ಸುನೀಲ ಧನಿಗೊಂಡ, ಮಹಾಪ್ರಧಾನ ಕಾರ್ಯದಶಿರ್ಯಾಗಿ ಶಿವಾನಂದ ಹೊಸಳ್ಳಿ, ಕಾರ್ಯದಶಿರ್ಯಾಗಿ ಬಸವರಾಜ ಗುಡ್ಡಪ್ಪನವರ, ಸಹಕಾರ್ಯದಶಿರ್ಯಾಗಿ ರಾಜು ಸುರಕೋಡ, ಖಜಾಂಚಿಯಾಗಿ ಕಿರಣ ಸರನಾಡಗೌಡರ ಹಾಗೂ 21 ಕಾರ್ಯಕಾರಿ ಸಮಿತಿ ಸದಸ್ಯರು ಅಧಿಕಾರ ಸ್ವೀಕಾರ ಮಾಡಿದರು.