‘ಲಿಂಗಾಯತ’ ಎಂದೇ ಜಾತಿ ಪ್ರಮಾಣ ಪತ್ರ ನೀಡಿ

18KOKATANUR2-Web
ಲಿಂಗಾಯತ ಸಮುದಾಯದ ಜನರಿಗೆ ಲಿಂಗಾಯತ ಎಂದು ನಮೂದಿಸಿಯೇ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿ ಶಂಕರಹಟ್ಟಿ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳ ಶಾಖೆಯಿಂದ ತಹಸೀಲ್ದಾರ್ ಮನವಿ ಸಲ್ಲಿಸಲಾಯಿತು. ಭೀಮಗೌಡ ಪರಗೊಂಡ, ಕಲ್ಮೇಶ ರಾಚಪ್ಪನವರ, ಸತ್ಯಪ್ಪ ಪಾಟೀಲ ಇದ್ದರು.
Published on

ಕೊಕಟನೂರ: ಲಿಂಗಾಯತ ಸಮುದಾಯಕ್ಕೆ ಲಿಂಗಾಯತ ಎಂದು ನಮೂದಿಸಿಯೇ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿ ಅಥಣಿ ತಾಲೂಕಿನ ವಿವಿಧ ಗ್ರಾಮಗಳ ರಾಷ್ಟ್ರೀಯ ಬಸವದಳ ಶಾಖೆ ವತಿಯಿಂದ ಶಂಕರಹಟ್ಟಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ್ದ ತಹಸೀಲ್ದಾರ್ ದುಂಡಪ್ಪ ಕೋಮಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಬಸವದಳದ ಕಾರ್ಯ ಕರ್ತ ಭೀಮಗೌಡ ಪರಗೊಂಡ ಮಾತನಾಡಿ, 2002ಕ್ಕಿಂತ ಮೊದಲು ಕಂದಾಯ ಇಲಾಖೆ ಲಿಂಗಾಯತ ಎಂದೇ ಜಾತಿ ಪ್ರಮಾಣ ಪತ್ರ ನೀಡುತ್ತಿತ್ತು. 2002 ರ ನಂತರ ತಂತ್ರಾಂಶದಲ್ಲಿ ಬದಲಾವಣೆ ಮಾಡಿ ವೀರಶೈವ ಲಿಂಗಾಯತ ಎಂದು ಜಾತಿ ಪ್ರಮಾಣ ಪತ್ರ ನೀಡಿ ಸಮುದಾಯದ ಜನರಿಗೆ ಅನ್ಯಾಯ ಮಾಡುತ್ತಿದೆ. ಈ ವಿಷಯವನ್ನು ಸರ್ಕಾರ ಹಾಗೂ ಕಂದಾಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಮೊದಲಿನಂತೆ ಲಿಂಗಾಯತ ಎಂದು ನಮೂದಿಸಿ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿದರು.

ರಾಚಗೌಡ ಗೌಡಪ್ಪನವರ, ಕಲ್ಮೇಶ ರಾಚಪ್ಪನವರ, ಸತ್ಯಪ್ಪ ಪಾಟೀಲ, ಮಲ್ಲಪ್ಪ ಬಿರಾದಾರ, ಅಶೋಕ ನಾವಿ, ಕುಮಾರ ಮಾಳಿ, ಕಿರಣ ನಾವಿ, ತಮ್ಮಣ್ಣ ಸಾಂವಗಾವ, ಸತೀಶ ಮಡಿವಾಳ, ಲಿಂಗರಾಜ ಗಳತಗಿ, ಬಸವರಾಜ ಗೂಗಾಡ, ನಾನಾಸಾಬ ಜತ್ತಿ, ವೀರೇಶ ಅಂಬಿ ಸೇರಿದಂತೆ ಅಥಣಿ ತಾಲೂಕಿನ ಶಂಕರಹಟ್ಟಿ, ಶೇಗುಣಸಿ, ದರೂರ, ಖವಟಕೊಪ್ಪ, ಅಡಹಳ್ಳಟ್ಟಿ ಗ್ರಾಮದ ರಾಷ್ಟ್ರೀಯ ಬಸವದಳ ಕಾರ್ಯಕತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net