

ಹುಬ್ಬಳ್ಳಿ: ಎಲ್ಲ ಒಳಪಂಗಡಗಳನ್ನು ಒಳಗೊಂಡು ವೀರಶೈವ ಲಿಂಗಾಯತ ಸಮಾಜದ ಪ್ರತಿಭಾವಂತ ವಿದ್ಯಾಥಿರ್ಗಳಿಗೆ ಪುರಸ್ಕಾರ ಸಮಾರಂಭವನ್ನು ಜುಲೈ 23ರಂದು ಸಂಜೆ 5.30ಕ್ಕೆ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಏರ್ಪಡಿಸಲಾಗಿದೆ ಎಂದು ಪ್ರತಿಭಾ ಪುರಸ್ಕಾರ ಸಮಿತಿ ಸಂಚಾಲಕ ಮಲ್ಲಿಕಾರ್ಜುನ ಸಾವಕಾರ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀೆಯಲ್ಲಿ ಶೇ. 95ಕ್ಕಿಂತ ಹೆಚ್ಚು ಅಂಕ ಪಡೆದ ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲೂಕಿನ ವಿದ್ಯಾಥಿರ್ಗಳು ಅರ್ಜಿ ಸಲ್ಲಿಸಬಹುದು ಎಂದರು.
ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಪುರಸ್ಕಾರಕ್ಕೆ ಅರ್ಹ ವಿದ್ಯಾಥಿರ್ಗಳು ಎರಡು ಭಾವಚಿತ್ರ, ಅಂಕಪಟ್ಟಿ, ಆಧಾರ್ ಕಾರ್ಡ್ನೊಂದಿಗೆ ಜುಲೈ 12ರೊಳಗೆ ಓಂ ಶಿವ ಕನ್ಸಲ್ಟನ್ಸ್, ಮಲ್ಲಿಕಾರ್ಜುನ ಅವೆನ್ಯೂ, ಕೊಪ್ಪಿಕರ ರಸ್ತೆ, ಹುಬ್ಬಳ್ಳಿ ಈ ವಿಳಾಸಕ್ಕೆ ಅಜಿರ್ ಸಲ್ಲಿಸಲು ಕೋರಲಾಗಿದೆ.
ಸತತ ಎರಡನೇ ವರ್ಷ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು, ಕಳೆದ ವರ್ಷದಂತೆ ಈ ಬಾರಿಯೂ ವಿದ್ಯಾಥಿರ್ಗಳಿಗೆ ಬೆಳ್ಳಿ ಗುಂಡಗಡಗಿ (ಕರಡಿಗೆ) ಹಾಗೂ ಈಶ್ವರಲಿಂಗ ಜತೆಗೆ ನಗದು ಪುರಸ್ಕಾರ ಕೊಡಲಾಗುವುದು. ಯುಪಿಎಸ್ಸಿಯಲ್ಲಿ ಸಾಧನೆ ಮಾಡಿದ ಶೃತಿ ಯರಗಟ್ಟಿ ಸೇರಿ ಸಮಾಜದ ಸಾಧಕರನ್ನು ಗೌರವಿಸಲಾಗುವುದು ಎಂದು ಸಮಿತಿಯ ಸಹ ಸಂಚಾಲಕ ಪ್ರಕಾಶ ಬೆಂಡಿಗೇರಿ ತಿಳಿಸಿದರು.
ವೀರಶೈವ ಸಂಟನಾ ಸಮಿತಿ, ಧಾರವಾಡ ಜಿಲ್ಲಾ ವೀರಶೈವ ಲಿಂಗಾಯತ ಸಂಟನೆ, ವೀರಶೈವ ಲಿಂಗಾಯತ ಅಭಿವೃದ್ಧಿ ಸಂ, ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಸಂಸ್ಥೆ, ವೀರಶೈವ ಸಮಾಜ ಸಂಟನಾ ಸೇವಾ ಸಮಿತಿ ಹಾಗೂ ವೀರಶೈವ ಸಮಾಜ ಸಂಟನಾ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.