ಭಾರೀ ವಾಹನಗಳ ಸಂಚಾರ ನಿಷೇಧಿಸಲು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಒತ್ತಾಯ

13092020 Lingasuguru KARAVE appele
Published on

ಲಿಂಗಸುಗೂರು: ಸ್ಥಳೀಯ ಕೆಲ ಪ್ರಮುಖ ರಸ್ತೆಗಳಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಸೀಲ್ದಾರ್ ಚಾಮರಾಜ ಪಾಟೀಲ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ಟ್ರಾಫಿಕ್ ಸಮಸ್ಯೆಯಾಗದಂತೆ ಗಮನ ಹರಿಸಬೇಕು. ಬಸವಸಾಗರ ವೃತ್ತದಿಂದ ಗಡಿಯಾರ ಚೌಕ್ ಮಾರ್ಗ ರಸ್ತೆ ಕಿರಿದಾಗಿದ್ದು, ಅಲ್ಲದೆ ಮಾರ್ಗ ಮಧ್ಯದ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ಸದರಿ ರಸ್ತೆ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರ ತಡೆಗೆ ಕಬ್ಬಿಣದ ಸರಳಿನಿಂದ ಹಾಕಿದ ಕಮಾನಿಗೆ ವಾಹನ ಡಿಕ್ಕಿ ಹೊಡೆದು ನೆಲಕ್ಕುರುಳಿದ್ದು, ಗುಣಮಟ್ಟದ ಕಬ್ಬಿಣದ ಸರಳು ಬಳಸಿ ಕಮಾನು ನಿರ್ಮಿಸಬೇಕೆಂದು ಒತ್ತಾಯಿಸಿದರು.

ಕರವೇ ತಾಲೂಕು ಅಧ್ಯಕ್ಷ ಜಿಲಾನಿಪಾಷಾ, ಶಿವರಾಜ ನಾಯಕ, ಹನುಮಂತ ನಾಯಕ, ಅಜೀಜ್ ಪಾಷಾ, ಚಂದ್ರು ನಾಯಕ, ರವಿಕುಮಾರ ಬರಗುಡಿ, ಅಲ್ಲಾವುದ್ದಿನ್, ನಿರುಪಾದಿ, ಮಹ್ಮದ್ ಇರ್ಫಾನ್, ಅಮರೇಶ, ಬಸವರಾಜ, ಆದಿಲ್, ಇಸ್ಮಾಯಿಲ್, ಮಹಬೂಬ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net