ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಯಾಗಲಿ; ತಾಲೂಕು ವಕೀಲರ ಸಂಘದ ಒತ್ತಾಯ

01032021 Lingasugur Advocates protest
Published on

ವೆಂಕಟೇಶ ತಾರಹಳ್ಳಿ ಕಗ್ಗೊಲೆ ಘಟನೆ ಖಂಡನೆ

ಲಿಂಗಸುಗೂರು: ಹೊಸಪೇಟೆ ನ್ಯಾಯಾಲಯದ ಆವರಣದಲ್ಲೇ ವಕೀಲ ವೆಂಕಟೇಶ ತಾರಹಳ್ಳಿ ಕಗ್ಗೊಲೆ ಘಟನೆ ಖಂಡಿಸಿ ತಾಲೂಕು ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಒಂದು ದಿನ ಕೋರ್ಟ್ ಕಲಾಪದಿಂದ ದೂರ ಉಳಿದು ಪ್ರತಿಭಟಿಸಿ, ಸಹಾಯಕ ಆಯುಕ್ತ ರಾಜಶೇಖರ ಡಂಬಳಗೆ ಸೋಮವಾರ ಮನವಿ ಸಲ್ಲಿಸಿದರು.

ನ್ಯಾಯವಾದಿಗಳ ಮೇಲೆ ಹಲ್ಲೆ, ಕೊಲೆಯಂಥ ಘಟನೆಗಳು ನಡೆಯುತ್ತಲೇ ಇವೆ. ವಕೀಲರಿಗೆ ಸೂಕ್ತ ಭದ್ರತೆ ನೀಡುವ ಸಂಬಂಧ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ತರಬೇಕು. ಇಂತಹ ಘಟನೆಗಳು ಮರುಕಳಿಸದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಕೀಲರಾದ ಎಚ್.ಮುದುಕಪ್ಪ, ನಾಗರಾಜ ಗಸ್ತಿ, ಸೂರ್ಯಚಂದ್ರ, ವೀರೇಶ ಸ್ಥಾವರಮಠ, ಕೃಷ್ಣಾ ನಾಯ್ಕ, ಮಹಾಲಿಂಗಪ್ಪ, ಹನುಮಂತಪ್ಪ, ನಾಗರಾಜ ಯಲಿಗಾರ, ಮಲ್ಲಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net