ತಳವಾರ ಜಾತಿಗೆ ಎಸ್ಟಿ ಮೀಸಲಾತಿ ಸಲ್ಲ

181122 Lingasuguru Valmiki Sangha Appeal
ಲಿಂಗಸುಗೂರು ಎಸಿ ಅವಿನಾಶ ಶಿಂಧೆಗೆ ಮಹರ್ಷಿ ವಾಲ್ಮೀಕಿ ನಾಯಕ ಸಮುದಾಯದವರು ಶುಕ್ರವಾರ ಮನವಿ ಸಲ್ಲಿಸಿದರು.
Published on

ಲಿಂಗಸುಗೂರು: ಹಿಂದುಳಿದ ವರ್ಗಗಳ ತಳವಾರ ಸಮುದಾಯದವರಿಗೆ ಎಸ್ಟಿ ಪ್ರಮಾಣಪತ್ರ ನೀಡುವುದನ್ನು ಖಂಡಿಸಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ನೇತೃತ್ವದಲ್ಲಿ ವಾಲ್ಮೀಕಿ ನಾಯಕ ಸಮುದಾಯದವರು ಪ್ರತಿಭಟನೆ ನಡೆಸಿ ಎಸಿ ಅವಿನಾಶ ಶಿಂಧೆಗೆ ಶುಕ್ರವಾರ ಮನವಿ ಸಲ್ಲಿಸಿದರು.

ನಾಯಕ ಬೇಡರು ಹಾಗೂ ವಾಲ್ಮೀಕಿ ಸಮುದಾಯದ ಜನರಿಗೆ ಸಂವಿಧಾನದತ್ತವಾಗಿ ಮೀಸಲಾತಿ ನೀಡಲಾಗಿದೆ. ಇತ್ತಿಚಿಗೆ ಸರ್ಕಾರ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಜನಸಂಖ್ಯೆ ಆಧರಿಸಿ ಮೀಸಲಾತಿ ಪ್ರಮಾಣವನ್ನು ಶೇ.7ಕ್ಕೆ ಹೆಚ್ಚಿಸಿದೆ. ಆದರೆ, ಪರಿಶಿಷ್ಟ ಪಂಗಡದಲ್ಲಿ ನಾನಾ ಜಾತಿಗಳನ್ನು ಒಳಪಡಿಸುವ ಮೂಲಕ ಬೇಡರ ನಾಯಕ ಹಾಗೂ ವಾಲ್ಮೀಕಿ ಸಮುದಾಯದ ಹಕ್ಕಿಗೆ ಕೊಡಲಿ ಪೆಟ್ಟು ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಳವಾರ ಮತ್ತು ಪರಿವಾರ ಕಸುಬು ಆಧಾರಿತ ಶಬ್ದಗಳಾಗಿದ್ದು, ನಾನಾ ಸಮುದಾಯಗಳಲ್ಲೂ ತಳವಾರಿಕೆ ಕಸುಬು ಮಾಡುವ ಜನರಿದ್ದಾರೆ. ಮೀಸಲಾತಿಗೆ ಒಳಪಡಲು ಸುಳ್ಳು ಜಾತಿ ಸೃಷ್ಟಿಸಿಕೊಂಡು ಎಸ್ಟಿ ಪ್ರಮಾಣ ಪತ್ರ ಪಡೆಯುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಡಿ.ಜಿ.ಗುರಿಕಾರ, ಮೌನೇಶ ನಾಯಕ, ಹನುಮಂತ ನಾಯಕ, ಮಹಾಂತೇಶ, ರಾಜೇಶ ನಾಯಕ, ನಂದೀಶ ನಾಯಕ, ರಮೇಶ ನಾಯಕ ವಕೀಲ, ಪ್ರಭು ಸುಗೂರ, ವೆಂಕಟೇಶ, ಶರಣಪ್ಪ, ತಿಪ್ಪಣ್ಣ, ದಿವಾಕರ ನಾಯಕ, ಶಿವಣ್ಣ ಕೋಟಾ, ಶಿವರಾಜ, ಬಸವಲಿಂಗಪ್ಪ, ಸಂಗಮೇಶ, ಚಂದ್ರು ನಾಯಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net