ಅಮರೇಶ್ವರ ದನಗಳ ಜಾತ್ರೆ ರದ್ದು

28022023 lingasugur avaninash sindhe
Published on

ಲಿಂಗಸುಗೂರು: ಜಿಲ್ಲೆಯಲ್ಲಿ ದನ, ಎಮ್ಮೆ ಸೇರಿ ಇತರ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೋಗ ಹರಡುವಿಕೆ ತಡೆಗಟ್ಟಲು ಜಿಲ್ಲಾಧಿಕಾರಿ ಆದೇಶದಂತೆ ತಾಲೂಕಿನ ಸುಕ್ಷೇತ್ರ ಅಮರೇಶ್ವರ ಜಾತ್ರಾಮಹೋತ್ಸವದ ದನಗಳ ಜಾತ್ರೆ ರದ್ದುಪಡಿಸಲಾಗಿದೆ ಎಂದು ಎಸಿ ಅವಿನಾಶ ಶಿಂಧೆ ತಿಳಿಸಿದ್ದಾರೆ.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಉಪನಿರ್ದೇಶಕರ ಪ್ರಸ್ತಾವನೆ ಮೇರೆಗೆ ಮಾ.7 ರಿಂದ ಆರಂಭವಾಗುವ ಅಮರೇಶ್ವರ ಜಾತ್ರೆಯಲ್ಲಿನ ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಣೆ ನಿಷೇಧಿಸಲಾಗಿದೆ. ರೈತರು ಜಾತ್ರೆಗೆ ಜಾನುವಾರುಗಳನ್ನು ಮಾರಾಟ ಮತ್ತು ಖರೀದಿಗೆ ತರದೆ ಸಹಕಾರ ನೀಡಬೇಕೆಂದು ಎಸಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net