

ಲಿಂಗಸುಗೂರು: ಮನುಷ್ಯ ಜೀವನದಲ್ಲಿ ಧರ್ಮ ಮಾರ್ಗ ಮತ್ತು ಪರೋಪಕಾರ ಮೈಗೂಡಿಸಿಕೊಂಡಾಗ ಮಾತ್ರ ಪುಣ್ಯಪ್ರಾಪ್ತಿಯಾಗಲಿದೆ ಎಂದು ಮುಂಬಯಿನ ಸಹಜಾನಂದ ಅವಧೂತರು ಹೇಳಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ಕರಡಕಲ್ ಸಿದ್ಧಾರೂಢ ಮಠದ 22ನೇ ವೇದಾಂತ ಪರಿಷತ್ ಮತ್ತು ರಾಮ ನವಮಿಯ ಸಾಮೂಹಿಕ ವಿವಾಹ ಕಾರ್ಯಕ್ರಮ ಬುಧವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು. ಮನುಷ್ಯ ಕೇವಲ ಹಣ ಗಳಿಸಿದರೆ ಜೀವನದಲ್ಲಿ ಸುಖ ಅನುಭವಿಸಲಾರ. ಪುಣ್ಯ ಗಳಿಸಬೇಕಾದರೆ ದಾನ, ಧರ್ಮ, ಧಾರ್ಮಿಕ ಕಾರ್ಯ ಮತ್ತು ಪರೋಪಕಾರದ ಬದುಕು ರೂಢಿಸಿಕೊಂಡರೆ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಾಗಲಿದೆ ಎಂದರು ಹೇಳಿದರು
ಸಾಮೂಹಿಕ ವಿವಾಹದಲ್ಲಿ ಇಪ್ಪತ್ತು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಮಠದ ಕೃಷ್ಣಾನಂದ ಅವಧೂತರು, ತಹಸೀಲ್ದಾರ್ ಡಾ.ಮಲ್ಲಪ್ಪ ಯರಗೋಳ, ಪ್ರಮುಖರಾದ ಭೂಪನಗೌಡ ಪಾಟೀಲ್, ಗಿರಿಮಲ್ಲನಗೌಡ ಪಾಟೀಲ್, ಡಾ.ಶಿವಬಸಪ್ಪ ಹೆಸರೂರು, ಎಚ್.ಬಿ.ಮುರಾರಿ, ಪಾಮಯ್ಯ ಮುರಾರಿ, ಡಾ.ರುದ್ರಗೌಡ ಪಾಟೀಲ್, ಡಾ.ರಂಗನಾಥ, ಡಾ.ಎಚ್.ಡಿ.ಕಡದಳ್ಳಿ, ಶರಣಗೌಡ ಮಾಲಿಪಾಟೀಲ್, ರುದ್ರಪ್ಪ ಬ್ಯಾಗಿ, ಕೆಂಚಪ್ಪ ಭಾವಿಮನಿ, ಭೂಪನಗೌಡ ವಕೀಲ, ಶರಣಪ್ಪ ಉಪ್ಪಾರ, ಬಸವರಾಜ ಮ್ಯಾಗೇರಿ ಇತರರಿದ್ದರು.