ಶಿವಸೇನೆ, ಎಂಇಎಸ್ ಕಿಡಿಗೇಡಿಗಳ ಬಂಧಿಸುವಂತೆ ನಿಜಸುಖಿ ಹಡಪದ ಅಪ್ಪಣ್ಣ ಯುವಕ ಸಂಘ ಪಾದಯಾತ್ರೆ

181221 Mudagal Hadapada Hapanna Youth Protest
ಶಿವಸೇನೆ ಮತ್ತು ಎಂಇಎಸ್ ಕಿಡಿಗೇಡಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ ನಿಜಸುಖಿ ಹಡಪದ ಅಪ್ಪಣ್ಣ ಯುವಕ ಸಂಘ ಮುದಗಲ್ ಘಟಕದ ಮುಖಂಡರು ಮುದಗಲ್‌ನಿಂದ ಪಟ್ಟಣದ ಎಸಿ ಕಚೇರಿಗೆ ಪಾದಯಾತ್ರೆಯಲ್ಲಿ ಆಗಮಿಸಿದರು.
Published on

ಲಿಂಗಸುಗೂರು: ಕನ್ನಡ ಧ್ವಜವನ್ನು ಸುಟ್ಟು ಹಾಕಿ ಅಪಮಾನಗೊಳಿಸಿದ ಶಿವಸೇನೆ ಮತ್ತು ಎಂಇಎಸ್ ಕಿಡಿಗೇಡಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ ನಿಜಸುಖಿ ಹಡಪದ ಅಪ್ಪಣ್ಣ ಯುವಕ ಸಂಘದ ಮುದಗಲ್ ಘಟಕದ ಮುಖಂಡರು ಮುದಗಲ್‌ನಿಂದ ಪಟ್ಟಣದ ಎಸಿ ಕಚೇರಿಗೆ ಶನಿವಾರ ಪಾದಯಾತ್ರೆಯಲ್ಲಿ ಬಂದರು.

ರಾಜ್ಯದ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಶಿವಸೇನೆ ಮತ್ತು ಎಂಇಎಸ್ ಸಂಘಟನೆಗಳು ಕೊಲ್ಹಾಪುರದಲ್ಲಿ ಕನ್ನಡ ಧ್ವಜವನ್ನು ಸುಟ್ಟು ಹಾಕುವ ಮೂಲಕ ನಾಡದ್ರೋಹ ಕೃತ್ಯ ವೆಸಗಿದ್ದಾರೆ. ಕೂಡಲೇ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಜತೆಗೆ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಬೇಕಾಗುತ್ತದೆ ಎಂದು ಒತ್ತಾಯಿಸಿದರು. ಬಳಿಕ ಎಸಿ ಕಚೇರಿ ಸಿಬ್ಬಂದಿ ರಾಜಕುಮಾರರಿಗೆ ಮನವಿ ಸಲ್ಲಿಸಿದರು.

ತಾಲೂಕು ಘಟಕದ ಮುತ್ತಣ್ಣ ಗುಡಿಹಾಳ, ಶರಣಬಸವ ಈಚನಾಳ, ಚುಡಾಮಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net