ಉದ್ದೇಶಪೂರ್ವಕವಾಗಿ ನಡೆದಿದೆ ಹತ್ಯೆ

230222 Lingasuguru Hindhu Organation Protest
ಲಿಂಗಸುಗೂರಿನಲ್ಲಿ ಹಿಂದು ಪರ ಸಂಘಟನೆಯವರು ಬುಧವಾರ ಪ್ರತಿಭಟನೆ ನಡೆಸಿದರು.
Published on

ಲಿಂಗಸುಗೂರು: ಶಿವಮೊಗ್ಗದ ಬಜರಂಗ ದಳದ ಕಾರ್ಯಕರ್ತ ಹರ್ಷರ ಹತ್ಯೆ ಖಂಡಿಸಿ ಪಟ್ಟಣದಲ್ಲಿ ಹಿಂದುಪರ ಸಂಘಟನೆಗಳು ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನದಿಂದ ಎಸಿ ಕಚೇರಿವರೆಗೆ ಮೆರವಣಿಗೆ ನಡೆಸಿ ಸಹಾಯಕ ಆಯುಕ್ತ ರಾಹುಲ್ ಸಂಕನೂರಗೆ ಮನವಿ ಸಲ್ಲಿಸಿದರು. ಹಿಂದು ಧರ್ಮ ರಕ್ಷಣೆಗೆ ಕೆಲಸ ಮಾಡುವ ಹಾಗೂ ಈ ಕುರಿತ ಚಿಂತಕರನ್ನು ಗುರಿಯಾಗಿಸಿಕೊಂಡು ಹತ್ಯೆಗೈಯಲಾಗುತ್ತಿದೆ. ಹಿಂದು ಪರ ಸಂಘಟನೆಯಲ್ಲಿ ಮುಂಚೂಣಿ ಕಾರ್ಯಕರ್ತನಾಗಿದ್ದ ಹರ್ಷರ ಏಳಿಗೆ ಸಹಿಸದೆ ದುಷ್ಟರು ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿದ್ದಾರೆ. ರಾಕ್ಷಸಿ ಮನೋಭಾವ ಪ್ರದರ್ಶಿಸುವ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಶಿವಕುಮಾರ ಕಾಳಾಪುರ, ಸೋಮು ನಾಯಕ, ರಘುಗೌಡ ನಾಯಕ, ಚನ್ನಬಸವ ಹಿರೇಮಠ, ಅನಂತದಾಸ, ಗಿರಿಮಲ್ಲನಗೌಡ ಪಾಟೀಲ್, ವೀರನಗೌಡ ಲೆಕ್ಕಿಹಾಳ, ವೀರೇಶ, ರಾಹುಲ್, ಪ್ರಮೋದ ಸಿಂಗ್, ಸಾಗರ, ಅಮರೇಶ ರತ್ನಗಿರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net