ಲಿಂಗಸುಗೂರು ಪುರಸಭೆ 4.27 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

Lingasuguru Purasabe
ಲಿಂಗಸುಗೂರಿನ ಸಾಂಸ್ಕೃತಿಕ ಭವನದಲ್ಲಿ ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ ಬುಧವಾರ ಬಜೆಟ್ ಮಂಡಿಸಿದರು.
Published on

ಲಿಂಗಸುಗೂರು: ಪುರಸಭೆಯಲ್ಲಿ 2023-24 ನೇ ಸಾಲಿನ 4.27 ಲಕ್ಷ ರೂ. ಉಳಿತಾಯ ಬಜೆಟ್ ಅನ್ನು ಬುಧವಾರ ಮಂಡಿಸಲಾಯಿತು.

ಸಾಂಸ್ಕೃತಿಕ ಭವನದಲ್ಲಿ ಅಧ್ಯಕ್ಷೆ ಸುನೀತಾ ಕೆಂಭಾವಿ ಅಧ್ಯಕ್ಷತೆಯಲ್ಲಿ ಪುರಸಭೆಯ ಆಯ-ವ್ಯಯ ಮಂಡಿಸಲಾಯಿತು. ಆಸ್ತಿ ತೆರಿಗೆಯಿಂದ 2 ಕೋಟಿ ರೂ., ನೀರಿನ ತೆರಿಗೆ 45 ಲಕ್ಷ ರೂ., ಬ್ಯಾನರ್, ಕೇಬಲ್ ಅಳವಡಿಕೆ, ವ್ಯಾಪಾರ, ಜನನ-ಮರಣ ಪ್ರಮಾಣಪತ್ರ ಹಾಗೂ ವಿವಿಧ ತೆರಿಗೆಗಳಿಂದ 65 ಲಕ್ಷ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದೆ.

ವಿವಿಧ ಮೂಲಗಳಿಂದ 15.17 ಕೋಟಿ ರೂ ಆದಾಯ ಬರಲಿದ್ದು, 15.13 ಕೋಟಿ ರೂ. ಖರ್ಚಾಗುವ ನಿರೀಕ್ಷೆ ಹೊಂದಲಾಗಿದೆ. ಉಪಾಧ್ಯಕ್ಷ ಎಂ.ಡಿ.ರಫೀ, ಸದಸ್ಯರಾದ ದೊಡ್ಡನಗೌಡ ಹೊಸಮನಿ, ಶಿವರಾಯ ದೇಗುಲಮಡಿ, ರೌಫ್ ಗ್ಯಾರಂಟಿ, ಬಾಬುರಡ್ಡಿ ಮುನ್ನೂರು, ಶರಣಪ್ಪ, ಮುದುಕಪ್ಪ ನಾಯಕ, ಮುತ್ತು ಮೇಟಿ, ಮಹಾಂತೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net