ಲಿಂಗಸುಗೂರಲ್ಲಿ ರಸ್ತೆ ಬದಿಯ ದೇವಸ್ಥಾನಗಳ ತೆರವು

08032020 Lingasuguru temple clearance
Published on

ಲಿಂಗಸುಗೂರು: ಸುಪ್ರೀಂ ಕೋರ್ಟ್ ಆದೇಶದನ್ವಯ ಕಂದಾಯ ಮತ್ತು ಸ್ಥಳೀಯ ಪುರಸಭೆ ಅಧಿಕಾರಿಗಳು ಜಂಟಿಯಾಗಿ ಪೊಲೀಸರ ಸಹಾಯದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳ ಬದಿಯ ದೇವಸ್ಥಾನ, ದೇವರುಗಳ ಕಟ್ಟೆಗಳನ್ನು ಭಾನುವಾರ ಬೆಳಗಿನ ಜಾವ ತೆರವುಗೊಳಿಸಿದರು.

ಪಟ್ಟಣದ ನ್ಯಾಯಾಲಯ ರಸ್ತೆ ಬದಿಯ ಬನ್ನಿ ಮಂಟಪ, ರೇಣುಕಾ ನಗರದ ರೇಣುಕಾದೇವಿ ದೇವಸ್ಥಾನ, ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿಯ ಬನ್ನಿ ಕಟ್ಟೆ, ವಿಸಿಬಿ ಕಾಲೇಜು ರಸ್ತೆಯ ಬನ್ನಿ ಕಟ್ಟೆ, ಲಕ್ಷ್ಮೀದೇವಿ ದೇವಸ್ಥಾನ ಬಳಿಯ ಬನ್ನಿಕಟ್ಟೆ, ಮದರ್ ಟ್ಯಾಂಕ್ ಎದುರಿನ ಬನ್ನಿಮಂಟಪ ಸೇರಿ ನಾನಾ ಭಾಗಗಳಲ್ಲಿ ನಿರ್ಮಿಸಿದ ಕಟ್ಟಡಗಳನ್ನು ಹಿಟಾಚಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು.

ತಹಸೀಲ್ದಾರ್ ಚಾಮರಾಜ ಪಾಟೀಲ್, ಸಿಪಿಐ ಯಶವಂತ ಬಿಸನಳ್ಳಿ, ಪುರಸಭೆ ಸಿಒ ಕೆ.ಕೆ.ಮುತ್ತಪ್ಪ, ಪಿಎಸ್‌ಐ ಪ್ರಕಾಶರಡ್ಡಿ ಡಂಬಳ, ಪೌರ ಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net